Download Our App

Follow us

Home » ಸಿನಿಮಾ » ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರೀತಿಯ ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಬರ್ತಿದೆ ‘ನೀನಾದೆ ನಾ’…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರೀತಿಯ ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಬರ್ತಿದೆ ‘ನೀನಾದೆ ನಾ’…!

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ವಿಷಯದಲ್ಲಿ ಕಾಂಪಿಟೇಷನ್‌ಗೆ ಬಿದ್ದಿರುವ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳ ಪೈಕಿ ಸ್ಟಾರ್ ಸುವರ್ಣ ಕೂಡ ಒಂದು. ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿರುವ ‘ನೀನಾದೆ ನಾ’ ಧಾರಾವಾಹಿಯು ಇದೀಗ ಅದೇ ಜೋಡಿಯೊಂದಿಗೆ ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಸಜ್ಜಾಗಿದೆ.

ಈ ಹೊಸ ಕಥೆಯ ಅಧ್ಯಾಯವು ಕರ್ನಾಟಕದ ಸುಂದರ ತಾಣ ದೈವಾರಾಧನೆಯ ತವರೂರಾಗಿರುವ ತುಳುನಾಡಿನಲ್ಲಿ ಆರಂಭವಾಗುತ್ತದೆ. ನಾಯಕ ವಿಕ್ರಂ ದಂಧೆ ನಡೆಸುತ್ತಾ, ಗೂಂಡಾಗಿರಿ ಮಾಡಿಕೊಂಡು ಕುಡ್ಲದ ಕರುಣಾಕರ್ ಶೆಟ್ಟಿ ಎಂಬ ಡಾನ್​​ನ ಬಲಗೈ ಬಂಟನಾಗಿರ್ತಾನೆ. ಇನ್ನು ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಮಗಳಾಗಿದ್ದು, ಉಡುಪಿ ಕೃಷ್ಣನ ಭಕ್ತೆಯಾಗಿರ್ತಾಳೆ. ಜೊತೆಗೆ ಬೇರೆ ಬೇರೆ ರೀತಿಯ ವಸ್ತ್ರಗಳಿರುವ ಕಾಸ್ಟ್ಯೂಮ್ ಅಂಗಡಿಯನ್ನು ಹೊಂದಿರುತ್ತಾಳೆ. ಒಂದ್ಕಡೆ ರೌಡಿಯಾಗಿದ್ರು ಒಳ್ಳೇದನ್ನೆ ಮಾಡೋ ವಿಕ್ರಂ, ಇನ್ನೊಂದ್ಕಡೆ ನೇರ ನಡೆಯನ್ನು ಹೊಂದಿದ್ದು ಯಾವ ಸವಾಲಿಗೂ ಸೈ ಅನ್ನೋ ವೇದಾ. ಇವರಿಬ್ಬರು ಹೇಗೆ ಒಂದಾಗ್ತಾರೆ ? ಈ ಎರಡು ವಿರುದ್ಧ ಮನಸುಗಳ ಸೆಣಸಾಟವೇ ಈ ಧಾರಾವಾಹಿಯ ಮುಖ್ಯ ಕಥಾಹಂದರ.


ಇನ್ನು  ಹಳೆ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಶುರುವಾಗುತ್ತಿರುವ ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ನೀವು ಮೆಚ್ಚಿರುವ ವಿಕ್ರಂ-ವೇದಾ ಜೋಡಿ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಪ್ರಸ್ತುತ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ರವರು ‘ಪಿಂಗಾರ ಪ್ರೊಡಕ್ಷನ್’ ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಹೊಸ ಕಥೆಯ ಜೊತೆ ವಿಕ್ರಂ-ವೇದಾರ ಸೆಣಸಾಟದೊಂದಿಗೆ ಶುರುವಾಗ್ತಿದೆ “ನೀನಾದೆ ನಾ” ಪ್ರೀತಿಯ ಹೊಸ ಅಧ್ಯಾಯ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ : ಕೋಮಲ್ ನಟನೆಯ ‘ಯಲಾಕುನ್ನಿ’ ಸಿನಿಮಾದ ಚಿತ್ರೀಕರಣ ಮುಕ್ತಾಯ..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here