ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಹನುಮ ಸಂಕೀರ್ತನ ಯಾತ್ರೆ ನಡೆಯುತ್ತಿದೆ. ಹನುಮ ಮಾಲೆ ಧರಿಸಿ ಸಂಕೀರ್ತನಾ ಮೆರವಣಿಗೆ ನಡೆಸುತ್ತಿದ್ದು, ಗಂಜಾಂನಲ್ಲಿ ಹನುಮ ಮಾಲಾಧಾರಿಗಳ ಧಾರ್ಮಿಕ ಸಭೆ ನಡೆಯಲಿದೆ.
ನಿಮಿಷಾಂಭ ದೇಗುಲದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ, ಹಿಂದೂ ಮುಖಂಡರಾದ ಮನೋಹರ್ ಮಠದ್ ,ಕೇಶವಮೂರ್ತಿ, ಗಣಪತಿ ಸ್ಚರೂಪಾನಂದ ಸ್ವಾಮೀಜಿ, ಲೋಹಿತ್ , ಮಾರ್ಕೇಂಡೇಯ ಭಾಗಿಯಾಗಿದ್ದರು.
ಇನ್ನು ಜಾಮಿಯಾ ಮಸೀದಿ ಮುಂಭಾಗದಲ್ಲೇ ಮೆರವಣಿಗೆ ಸಾಗುವ ಹಿನ್ನಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಕೀರ್ತನ ಯಾತ್ರೆಗೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. 4 ಕಿಲೋ ಮೀಟರ್ ದೂರ ಸಂಕೀರ್ತನ ಯಾತ್ರೆ ಸಾಗಲಿದ್ದು, ಸುಮಾರು 2000ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ : ಓಲ್ಡ್‌ಇಸ್‌ಗೋಲ್ಡ್ ಥೀಮ್‌ನಲ್ಲಿ ಡಾಲಿ ಧನಂಜಯ್-ಧನ್ಯತಾ ಆಮಂತ್ರಣ ಪತ್ರಿಕೆ.. ಸಿಎಂಗೆ ಮೊದಲ ಇನ್ವಿಟೇಷನ್ ನೀಡಿದ ನಟ..!
Post Views: 40