Download Our App

Follow us

Home » ಕ್ರೀಡೆ » ಅಂತರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಸ್ಪಿನ್ ಮಾಂತ್ರಿಕ ಆರ್.​ ಅಶ್ವಿನ್!

ಅಂತರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಸ್ಪಿನ್ ಮಾಂತ್ರಿಕ ಆರ್.​ ಅಶ್ವಿನ್!

ಟೀಂ ಇಂಡಿಯಾದ  ಹಿರಿಯ ಆಟಗಾರ, ಸ್ಪಿನ್​ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್, ವಿದಾಯ ಹೇಳಿದ್ದಾರೆ. ಈ ಮೂಲಕ 14 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಇದಾಗ್ಯೂ ಅವರು ದೇಶಿ ಕ್ರಿಕೆಟ್‌ನಲ್ಲಿ ಹಾಗೂ  IPLನಲ್ಲಿ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾರತದ ಫೈನಲ್ ಹಾದಿಯನ್ನು ನಿರ್ಧರಿಸಲಿರುವ ಮಹತ್ವದ BGT ಟೆಸ್ಟ್​​ ಸರಣಿಯ ನಡುವೆಯೇ ಸ್ಟಾರ್ ಆಲ್‌ರೌಂಡರ್ ಆರ್ ಅಶ್ವಿನ್ ಅವರ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ರವಿಚಂದ್ರನ್ ಅಶ್ವಿನ್ ಈವರೆಗೆ 106 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 200 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅಲ್ಲದೆ ತಮ್ಮ ಕೆರಿಯರ್​ನಲ್ಲಿ 27246 ಎಸೆತಗಳನ್ನು ಎಸೆದಿರುವ ಅವರು 537 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಹಾಗೆಯೇ 116 ಏಕದಿನ ಪಂದ್ಯಗಳಲ್ಲಿ 114 ಇನಿಂಗ್ಸ್ ಆಡಿರುವ ಅಶ್ವಿನ್ 6303 ಎಸೆತಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. ಇನ್ನು 65 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಅಶ್ವಿನ್ 72 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ 5ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.

38 ವರ್ಷದ ಅಶ್ವಿನ್ ಕೊನೆಯ ಬಾರಿ ಏಕದಿನ ಪಂದ್ಯವಾಡಿದ್ದು 2023 ರಲ್ಲಿ. ಇದಾದ ಬಳಿಕ ಅವರು ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹಾಗೆಯೇ 2022ರಲ್ಲಿ ಕೊನೆಯ ಟಿ20 ಪಂದ್ಯವಾಡಿದ್ದ ಅಶ್ವಿನ್, ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದರು.

ಇದನ್ನೂ ಓದಿ : ದೊಡ್ಮನೆಯಲ್ಲಿ ಕಿತ್ತಾಟದಿಂದ ರದ್ದಾಯ್ತು ಟಾಸ್ಕ್ – ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here