Download Our App

Follow us

Home » ರಾಜಕೀಯ » ರಾಜ್ಯ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ನೇಮಕ..!

ರಾಜ್ಯ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ನೇಮಕ..!

ಬೆಂಗಳೂರು : ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿಅವರು ನೇಮಕವಾಗಿದ್ದಾರೆ. ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದಾರೆ.

ಎರಡು ವಾರಗಳ ಹಿಂದೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸಂದರ್ಶನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸೌಮ್ಯರೆಡ್ಡಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆಯಾಗಿ ಅವಕಾಶ ಮಾಡಿಕೊಟ್ಟಿದೆ. ಸೌಮ್ಯ ರೆಡ್ಡಿ ಒಂದು ಬಾರಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದರು.

ಇನ್ನು 41 ವರ್ಷದ ಸೌಮ್ಯ ರೆಡ್ಡಿ ಮಾರ್ಚ್ 18, 1983ರಲ್ಲಿ ಜನಿಸಿದರು. ಬೆಂಗಳೂರಿನ ಆರ್‌.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಪೂರ್ಣಗೊಳಿಸಿ, ನ್ಯೂಯಾರ್ಕ್‌ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಅಧ್ಯಯನವನ್ನು ಸೌಮ್ಯ ರೆಡ್ಡಿ ಪೂರ್ಣಗೊಳಿಸಿದ್ದಾರೆ.

ಜೊತೆಗೆ ತಾವು ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ, ಮಾಜಿ ಶಾಸಕಿಯಾಗಿದ್ದು, ಇದೇ ತಮ್ಮ ಉದ್ಯೋಗ ಎಂದು ಈ ಹಿಂದೆ ಲೋಕಸಭಾ ಚುನಾವಣೆ ನಾಮಪತ್ರ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.

ಸೌಮ್ಯ ರೆಡ್ಡಿ ರಾಜಕೀಯ ಹಾದಿ :

  • 2013- ಅನಿಮಲ್ಸ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ ನಿರ್ದೇಶಕಿ ಆಗಿ ಆಯ್ಕೆ
  • 2016-ರಾಜಕೀಯ ಪ್ರವೇಶ
    ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ,
  • 2017-ಯುವ ಕಾಂಗ್ರೆಸ್ ಬೆಂಗಳೂರು ನಗರ ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಆಯ್ಕೆ
  • 2018-ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ
  • 2019- ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ,
  • 2024- ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ
  • 2024-ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಇದನ್ನೂ ಓದಿ : ಭಕ್ತರ ಸೌಕರ್ಯಕ್ಕಾಗಿ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ – ಡಾ.ಜಿ.ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ಕಾಸ್ಟಿಂಗ್​​ ಕೌಚ್​ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್​​ ಚೇಂಬರ್​​ನಲ್ಲಿ ಮೆಗಾ ಮೀಟಿಂಗ್​..!

ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್

Live Cricket

Add Your Heading Text Here