Download Our App

Follow us

Home » ಸಿನಿಮಾ » ‘ಜಂಬೂ ಸರ್ಕಸ್’ ಚಿತ್ರದ ‘ಮನಸೋತೆ ಮನಸಾರೆ’ ಹಾಡು ರಿಲೀಸ್..!

‘ಜಂಬೂ ಸರ್ಕಸ್’ ಚಿತ್ರದ ‘ಮನಸೋತೆ ಮನಸಾರೆ’ ಹಾಡು ರಿಲೀಸ್..!

ಚಂದನವನದ ಸುಪ್ರಸಿದ್ದ ನಿರ್ದೇಶಕ ಎಂಡಿ ಶ್ರೀಧರ್ ಅವರು ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ‘ಜಂಬೂ ಸರ್ಕಸ್’ ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಿಲೀಸ್ ಗೆ ಸಿದ್ದವಾಗಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನೆರವೇರಿದೆ. ಬುಲ್ ಬುಲ್, ಕೃಷ್ಣ, ಚೆಲ್ಲಾಟ, ಪೊರ್ಕಿ, ಒಡೆಯ ಸೇರಿದಂತೆ ಸ್ಟಾರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ ಶ್ರೀಧರ್ ಅವರು ಒಡೆಯ ನಂತರ ಗ್ಯಾಪ್ ತಗೊಂಡು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ನಿರ್ದೇಶಕ ಎಂಡಿ ಶ್ರೀಧರ್ ಇದುವರೆವಿಗೂ ನಿರ್ದೇಶನ ಮಾಡಿದ ಸಿನಿಮಾ ಮಾಗಳೆಲ್ಲ ಸೂಪರ್ ಹಿಟ್ ಆಗಿವೆ. ಈಗ ಅವರ ‘ಜಂಬೂ ಸರ್ಕಸ್’ ಸಿನಿಮಾ ಕೂಡ ಆ ನಿಟ್ಟಿನಲ್ಲಿ ಸಾಗುವಂತಿದೆ. ಅದಕ್ಕೆ ಸಾಕ್ಷಿಯಾಗಿ ಚಿತ್ರದ  ‘ಮನಸೂತೆ ಮನಸಾರೆ’ ಎಂಬ ಇಂಪಾದ ಹಾಡು ಬಿಡುಗಡೆಯಾಗಿದೆ. ಕವಿರಾಜ್ ಅವರ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡುತ್ತಾ ಚಿತ್ರದ ಇನ್ನೆರಡು ಹಾಡು ‘ಗ್ರಹಚಾರ’ ಹಾಗೂ ‘ಗಾಂಚಲಿ ಗಂಗವ್ವ’ ಸಹ ಕಳೆದ ಶನಿವಾರ ಎಂಎಂಬಿ ಲೆಗಸಿ ಸಭಾಂಗಣದಲ್ಲಿ ಅನಾವರಣಗೊಂಡಿದೆ.

ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ನಿರ್ಮಾಪಕ ಎಚ್ ಸಿ ಸುರೇಶ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಜಂಬೂ ಸರ್ಕಸ್ ನಿಮ್ಮ ಸಿನಿಮಾ ಎಂದು ಪ್ರೋತ್ಸಾಹಿಸಿ, ಹಾರೈಸುವಂತೆ ವಿನಂತಿಸಿಕೊಂಡಿದ್ದಾರೆ. ಇನ್ನು, ಎಂಡಿ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾದಲ್ಲೂ ಸಹ ನಾಯಕಿಯ ಹೆಸರನ್ನು ಅಂಕಿತ ಎಂದು ಮುಂದುವರೆಸಿದ್ದಾರೆ. ಅವರ ಮೊದಲ ಸಿನಿಮದಿಂದ ಸಹ ನಾಯಕಿಗೆ ಅಂಕಿತ ಎಂದೇ ಇರಬೇಕು ಎಂದು ಅವರ ಸಂಕಲ್ಪ ಯಾಕೆ ಮಾಡಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ.

ಇನ್ನು, ಶ್ರೀ ಮಹತಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಜಂಬೂ ಸರ್ಕಸ್ ಚಿತ್ರಕ್ಕೆ ಸಾಹಸವನ್ನು ರವಿ ವರ್ಮಾ ನೀಡಿದ್ದಾರೆ. ಎ ಹರ್ಷ ಮೂರು ಹಾಡುಗಳಿಗೆ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ನಾಯಕ ನಟನಾಗಿ ಪ್ರವೀಣ್ ತೇಜ್ ನಾಯಕಿಯಾಗಿ ಅಂಜಲಿ ಅಭಿನಯಿಸಿದ್ದಾರೆ. ಜಯಂತ್ ಕಾಯಕಿಣಿ, ಡಾ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಗೀತ ಸಾಹಿತ್ಯ ಬರೆದಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಜ್ಞಾನೇಶ ಸಂಕಲನ ಓದಗಿಸಿದ್ದಾರೆ. ಜಂಬೂ ಸರ್ಕಸ್ ಪೋಷಕ ಕಾಲವಿದರಾಗಿ ಅವಿನಾಶ್, ಅಚ್ಯುತ ಕುಮಾರ್, ರವಿಶಂಕರ್ ಗೌಡ, ಆಶಾಲತ, ಲಕ್ಷ್ಮಿ ಸಿದ್ದಯ್ಯ, ನಯನ ಶರತ್, ಜಗಗಪ್ಪ ಹಾಗೂ ದಿವಂಗತ ಮೋಹನ್ ಜುನೇಜ ಇದ್ದಾರೆ.

ಇದನ್ನೂ ಓದಿ : ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ..!

Leave a Comment

DG Ad

RELATED LATEST NEWS

Top Headlines

ಮೈಸೂರಿನಲ್ಲಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಮೈಸೂರು : ಮೈಸೂರಿನಲ್ಲಿ ಹಾಡುಹಗಲೇ ಮನೆಗಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕಳ್ಳತನದ ಯತ್ನ ವಿಫಲವಾಗಿದೆ. ಜಿಲ್ಲೆಯ ಬನ್ನೂರಿನ ರಾಮದೇವರ ಬೀದಿಯಲ್ಲಿ ಜಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ

Live Cricket

Add Your Heading Text Here