ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಲ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ ಇದೀಗ BJP ಶಾಸಕರಿಂದಲೇ ಸಿಎಂ ಸಿದ್ದುಗೆ ಬೆಂಬಲ ದೊರೆತಿದೆ.
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಯಶವಂತಪುರ ಶಾಸಕ S.T.ಸೋಮಶೇಖರ್ ಅವರು, ಮುಡಾ ಸೈಟ್ ಪ್ರಕರಣದಲ್ಲಿ ಸಿಎಂ ರಾಜೀನಾಮೆ ಕೊಡಬೇಕಿಲ್ಲ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರಿಗೆ ಕೆಲಸ ಇಲ್ಲ. ಹೀಗಾಗಿ ಇದೆಲ್ಲಾ ಮಾಡ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿದ್ದಾಗಲೇ ಈ ಸೈಟ್ ಕೊಟ್ಟಿದ್ದು. ಸರ್ಕಾರವೇ ಸೈಟ್ ಅಲಾಟ್ ಮಾಡಿ ಈಗ ತಪ್ಪು ಅಂದ್ರೆ ಹೇಗೆ? ಡೆವಲಪ್ಮೆಂಟ್ ಸೈಟ್ ಕೊಡಬೇಕು ಅಂತ ಬಿಜೆಪಿ ಸರ್ಕಾರವೇ ನಿರ್ಧರಿಸಿತ್ತು ಎಂದಿದ್ದಾರೆ.
ಸಿದ್ದರಾಮಯ್ಯ ಪತ್ನಿ ಒಬ್ಬರೇ ಅಲ್ಲ ಹಲವರು ಸೈಟ್ ಪಡೆದಿದ್ದಾರೆ. ಕಾನೂನು ಪ್ರಕಾರವೇ ಸಿಎಂ ಪತ್ನಿಗೆ ಸೈಟ್ ಕೊಡಲಾಗಿದೆ. ಮನಸ್ಸಿಗೆ ನೋವಾಗಿ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟಿದ್ದಾರೆ. ಇನ್ನು ಬಿಜೆಪಿ ನಾಯಕರು ಯಾರೂ ಸೈಟು ಪಡೆದಿಲ್ವಾ ಎಂದು ಬಿಜೆಪಿ ಸರ್ಕಾರ, ಸ್ವಪಕ್ಷ ಮುಖಂಡರನ್ನೇ ಯಶವಂತಪುರ ಶಾಸಕ S.T.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಗಾದೆ ಮಾತು ಸಿಎಂಗೆ ಅನ್ವಯಿಸುತ್ತಿದೆ – ವಿಜಯೇಂದ್ರ ವ್ಯಂಗ್ಯ..!