2024ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ನಿನ್ನೆ ಸಂಜೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿದೆ. ಚಂದನವನದ ಹಲವು ನಟ-ನಟಿಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಪೈಕಿ ಸ್ಯಾಂಡಲ್‌ವುಡ್‌ನ ಸಾಲು ಸಾಲು ಸಿನಿಮಾಗಳಿಗೆ ಪ್ರಶಸ್ತಿಗಳು ಅರಸಿ ಬಂದಿವೆ. ಆ ಪೈಕಿ ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸರಣಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಕನ್ನಡದ ಕೆಲವು ಒಳ್ಳೆಯ ಸಿನಿಮಾಗಳು ಹಲವು ಪ್ರಶಸ್ತಿಗೆ ಭಾಜನವಾಗಿವೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಟೇರ’ ಇನ್ನೂ ಕೆಲವು ಸಿನಿಮಾಗಳು ಹೆಚ್ಚಿನ ಪ್ರಶಸ್ತಿ ಬಾಚಿಕೊಂಡಿವೆ. ಸೈಮಾ 2024 ಪ್ರಶಸ್ತಿಗೆ ಭಾಜನವಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.
ಸೈಮಾ 2024 ಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳ ಪಟ್ಟಿ :
- ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ವಿಲನ್- ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ಗಾಯಕ- ಕಪಿಲ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
- ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)
- ಅತ್ಯುತ್ತಮ ಹೊಸ ನಿರ್ದೇಶಕ- ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
- ಅತ್ಯುತ್ತಮ ಹೊಸ ನಟ- ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫಾ)
- ಅತ್ಯುತ್ತಮ ಭರವಸೆಯ ನಟಿ- ವೃಷಾ ಪಾಟೀಲ್ (ಲವ್)
- ಅತ್ಯುತ್ತಮ ಹೊಸ ನಟಿ- ಆರಾಧನಾ (ಕಾಟೇರ)
- ಅತ್ಯುತ್ತಮ ಸಂಗೀತ ನಿರ್ದೇಶಕ- ವಿ ಹರಿಕೃಷ್ಣ (ಕಾಟೇರ)
- ಅತ್ಯುತ್ತಮ ಕನ್ನಡ ಸಿನಿಮಾ- ಕಾಟೇರ
- ಅತ್ಯುತ್ತಮ ಗಾಯಕಿ: ಮಂಗ್ಲಿ (ಕಾಟೇರ)
- ಅತ್ಯುತ್ತಮ ಸಾಹಿತ್ಯ- ಡಾಲಿ ಧನಂಜಯ್ (ಟಗರುಪಲ್ಯ)
- ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)
- ಅತ್ಯುತ್ತಮ ಸಿನಿಮಾಟೊಗ್ರಫರ್- ಶ್ವೇತ ಪ್ರಿಯ (ಕೈವ)
- ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
- ಸಿನಿಮಾ ರಂಗಕ್ಕೆ ಸೇವೆ- ಶಿವರಾಜ್ ಕುಮಾರ್
- ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
- ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ: ಅಭುವನಸ ಫಿಲಮ್ಸ್
ಇದನ್ನೂ ಓದಿ : ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಜಾಗ ಅಂತಿಮ – ಇಲ್ಲಿದೆ ವಿವರ..!
Post Views: 124