ಹಾಸನ : ರಾಜ್ಯದಲ್ಲಿ ಒಂದು ಇಂಚು ಸಿಎಂ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಿದ್ರೆ ರಕ್ತಕ್ರಾಂತಿ ಆಗುತ್ತದೆ. ನೀವು ಎಚ್ಚರಿಕೆಯಿಂದ ಇರಬೇಕು. ನಿಮಗೆ ಏನಾದರೂ ಆ ಆಲೋಚನೆ ಇದ್ದರೆ, ವಾಪಸ್ ತೆಗೆದುಕೊಳ್ಳಿ, ಇಲ್ಲವಾದರೆ ರಕ್ತಕ್ರಾಂತಿ ಆಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ತೆಗೆದುಕೊಂಡು ಪ್ರಾಸಿಕ್ಯೂಷನ್‌ಗೆ ನೋಟೀಸ್ ನೀಡುತ್ತಾರೆ ಎಂಬ ಗುಮಾನಿ ಹರಡಿದೆ. ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಬರುತ್ತಿದೆ. ಟಿವಿ ಮಾಧ್ಯಮಗಳಲ್ಲಿ ಬಂದಿದ್ದು, ಬಹುಶಃ ನಿಜ ಆಗಬಹುದು. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಬಿಜೆಪಿ ಸರ್ಕಾರ ಎರಡು ಬಾರಿಯೂ ಮುಂಭಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ, ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಈ ಬಾರಿ ಪುನಃ ಇದೇ ಆಟವನ್ನು ಬಿಜೆಪಿಯವರು ಆಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
136 ಶಾಸಕರ ಪ್ರಚಂಡ ಬಲವಿರೋ ಸಿದ್ದು ಸರ್ಕಾರವನ್ನು ಇಳಿಸಲು ಹೊರಟಿದ್ದೀರಿ. ನಿಮ್ಮ ಆಟ ಈ ಬಾರಿ ನಡೆಯೋದಿಲ್ಲ, ಸಿಎಂ ಸಿದ್ದು ಜೊತೆ ನಾವಿದ್ದೇವೆ ಎಂದು ಬಿಜೆಪಿ-ಜೆಡಿಎಸ್ ನಾಯಕರಿಗೆ ಶಿವಲಿಂಗೇಗೌಡ ವಾರ್ನಿಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೇ ಬಿಜೆಪಿ, ಕೇಂದ್ರದ ವಿರುದ್ಧ ಯುದ್ಧಕ್ಕೆ ರೆಡಿಯಾಗಿ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಹೋರಾಟಕ್ಕೆ ಸಿದ್ಧರಾಗಿ ಎಂದಿದ್ದಾರೆ.
ಇದನ್ನೂ ಓದಿ : ಮುಡಾ ಹಗರಣ ಕೇಸ್ – ವಿವರಣೆ ಕೋರಿ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್..!