ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ನ ಸೊಂದಲಗೆರೆಯಲ್ಲಿ ಶ್ರೀ ಲಕ್ಷ್ಮೀದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಲಕ್ಷ್ಮೀ ದೇವರ ಭಕ್ತ ಮಂಡಲಿ(ರಿ) ನೇತೃತ್ವದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಪುನರ್ ನಿರ್ಮಿಸಿಸಲಾಗಿದೆ. ನೂತನ ದೇಗುಲದಲ್ಲಿ ಶ್ರೀ ಲಕ್ಷ್ಮೀದೇವಿಯವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ದಿನಾಂಕ 12-11-2024 ರಿಂದ 14-11-2024 ನೇ ಗುರುವಾರದವರೆಗೆ ನಡೆಯಲಿದೆ.
ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಜೀರ್ಣೋದ್ಧಾರ ಲೋಕಾರ್ಪಣೆಯ ಉದ್ಘಾಟನಾ ಸಮಾರಂಭ ನ. 14ರಂದು ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಸ್ಮರಣೆ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ನೆರೆವೇರಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ವಿಜಯನಗರ ಬೆಂಗಳೂರು ಇಲ್ಲಿನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರು ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ದಸರಿಘಟ್ಟದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿರವರು, ಕುಣಿಗಲ್ನ ಅರೆಶಂಕರ ಮಠ, ಗವಿಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿರವರು, ಬೆಟ್ಟಹಳ್ಳಿಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿರವರು ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಹೆಚ್.ಡಿ. ರಂಗನಾಥ್, ಸೊಂದಲಗೆರೆ ಕೆಂಪನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಕಾರ್ಯಕ್ರಮದ ಉಪಸ್ಥಿತಿ ವಹಿಸಲಿದ್ದಾರೆ ಎಂದು ಶ್ರೀ ಲಕ್ಷ್ಮೀ ದೇವರ ಭಕ್ತ ಮಂಡಲಿ(ರಿ)ಯ ಅಧ್ಯಕ್ಷರಾದ ಶ್ರೀ ಎಸ್. ಎನ್. ಕೃಷ್ಣಯ್ಯ ತಿಳಿಸಿದ್ದಾರೆ.
ಇನ್ನು ನ.12 ರಂದು ಸಂಜೆ 4-30ಕ್ಕೆ ಸರಿಯಾಗಿ ಗಂಗಾಪೂಜೆ, ಗೋಪೂಜೆ, ದೀಪಾರಾಧನೆ, ಮಹಾಗಣಪತಿ ಪೂಜೆ, ರಕ್ಷಾಬಂಧನ, ಕಲಶಸ್ಥಾಪನೆ, ಕಲಶಾರಾಧನೆ, ಮಹಾಗಣಪತಿ ಹೋಮ,ಮಹಾ ಮಂಗಳಾರತಿ, ತೀರ್ಥಪ್ರಸಾದ ನಿಯೋಗ, ನಂತರ ಅಮ್ಮನವರಿಗೆ ಶಯ್ಯಾದಿವಾಸ ಪುಷ್ಪಾಧಿವಾಸ ಫಲಾಧಿವಾಸ ಹಾಗೂ ಧನಾಧಿವಾಸ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ನ.12 ರಂದು ಬೆಳಿಗ್ಗೆ 4-30 ರಿಂದ 5-30 ಗಂಟೆಯೊಳಗೆ ಸಲ್ಲುವ ಶುಭ ತುಲಾಲಗ್ನದಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರನ್ನು ನವರತ್ನ ಖಚಿತ ದಿವ್ಯ ಸಿಂಹಾಸನದಲ್ಲಿ ಅಷ್ಟಬಂಧನ ಪೂರ್ವಕವಾಗಿ ಪ್ರತಿಷ್ಠಾಪನಾ ಕೈಂಕರ್ಯ ಹಾಗೂ ವೇದಪಾರಾಯಣದೊಂದಿಗೆ ಕಳಸರಾಧನೆ.
ನ.14ರಂದು ಬೆಳಿಗ್ಗೆ 4-30 ರಿಂದ 5-30 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ಜ್ಞಾನ ವಿಮಾನಗೋಪುರ, ಕಳಸ ಪ್ರತಿಷ್ಠಾಪನಾ ಕೈಂಕರ್ಯ ಶ್ರೀ ಸಿದ್ಧರಾಮ ಚೈತನ್ಯಸ್ವಾಮಿಗಳ ಅಮೃತ ಹಸ್ತದಿಂದ ಕಲಶಾರಾಧನೆ, ವಿಮಾನಗೋಪುರ ಪ್ರಾಣದೇವತಾ ಹೋಮಗಳು, ಮಹಾಲಕ್ಷ್ಮಿ ಸಹಸ್ರನಾಮ ಹೋಮ, ಗ್ರಾಯಿತ್ರಿ ಹೋಮ, ನಡೆಯಲಿದೆ ಎಂದು ಶ್ರೀ ಲಕ್ಷ್ಮೀ ದೇವರ ಭಕ್ತ ಮಂಡಲಿ(ರಿ)ಯ ಅಧ್ಯಕ್ಷರಾದ ಶ್ರೀ ಎಸ್. ಎನ್. ಕೃಷ್ಣಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು..!