Download Our App

Follow us

Home » ಸಿನಿಮಾ » ಬಿಗ್​ಬಾಸ್‌ನಲ್ಲಿ ಶಾಕಿಂಗ್‌ ಎಲಿಮಿನೇಷನ್ – ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ದೊಡ್ಮನೆಯಿಂದ ಔಟ್​?

ಬಿಗ್​ಬಾಸ್‌ನಲ್ಲಿ ಶಾಕಿಂಗ್‌ ಎಲಿಮಿನೇಷನ್ – ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ದೊಡ್ಮನೆಯಿಂದ ಔಟ್​?

ಬಿಗ್​ಬಾಸ್‌ ಕನ್ನಡ ಸೀಸನ್‌ 11ರ ಫಿನಾಲೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ. ಈ ಹೊತ್ತಲ್ಲಿ ದೊಡ್ಮನೆಯಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಫೈನಲಿಸ್ಟ್‌ ಆಗಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್​ಬಾಸ್​​ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ.

ಈ ಬಾರಿ ‘ಬಿಗ್​​ಬಾಸ್​ಗೆ​ ​ಕಾಲಿಟ್ಟ ಪ್ರತಿಯೊಬ್ಬ ಸ್ಪರ್ಧಿ ಕೂಡ ದೊಡ್ಮನೆಯಲ್ಲಿ ಸದ್ದು ಮಾಡಿದ್ರು. ಆದ್ರೆ ಅನೇಕರನ್ನು ಎದುರು ಹಾಕಿಕೊಂಡ ಡೇರಿಂಗ್​ ಗರ್ಲ್​, ನಾನು ಯಾರಿಗೂ ಹೆದರವುದಿಲ್ಲ ಅನ್ನೋದನ್ನ ತನ್ನ ಆಟದ ಮೂಲಕವೇ ತೋರಿಸಿಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ​ ಎಂದು ಹೇಳಲಾಗ್ತಿದೆ.

ಹೌದು.. ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಈ ವಾರ ಬಿಗ್​ಬಾಸ್​ ಮನೆಯ ಜರ್ನಿ ಮುಗಿಸಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮನೆಯ ಸ್ಪರ್ಧಿಗಳೆಲ್ಲ ಇವರನ್ನೇ ಪದೇ ಪದೇ ಟಾರ್ಗೆಟ್ ಮಾಡಿದ್ರೂ ಕುಗ್ಗದ ಚೈತ್ರಾ, ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್ ಎನ್ನುತ್ತಲೇ ದೊಡ್ಮನೆಯಲ್ಲಿ ಅಬ್ಬರ ಆಟ ಆಡ್ತಿದ್ದರು.

ಬಿಗ್​​ಬಾಸ್​ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಬೋರ್ಡ್​ ಪಡೆದು ಅನೇಕ ಬಾರಿ ಜೈಲು ಸೇರಿದ್ದ ಚೈತ್ರಾ, ನಾನು ಕಳಪೆ ಅಲ್ಲ ಅಂತ ಸಾಬೀತು ಪಡಿಸಿಕೊಳ್ಳಲು ಸ್ಟ್ರಾಂಗ್​ ಆಗಿಯೇ ಟಾಸ್ಕ್​ ಆಡ್ತಿದ್ದರು. ಇನ್ನು ಮಾತಿನ ಮಲ್ಲಿ ಎಂದೇ ಫೇಮಸ್​ ಆಗಿದ್ದ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯೊಳಗೆ ಆಟ ಹಾಗೂ ಆವೇಷದ ಮಾತುಗಳನ್ನು ಹೊರತುಪಡಿಸಿ ಮನರಂಜನೆಯನ್ನು ಸಹ ನೀಡಿ ಪ್ರೇಕ್ಷಕರ ಹೃದಯ ಗೆದ್ದಿದ್ದರು.

ಆದ್ರೀಗ ಫಿನಾಲೆಗೆ ಕೆಲ ದಿನಗಳು ಬಾಕಿ ಇರುವಾಗ್ಲೆ ಚೈತ್ರಾ ಕುಂದಾಪುರ ಆಟ ನಿಲ್ಲಿಸಿ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಈ ಸುದ್ದಿ ಅವರ ಅಭಿಮಾನಿಗಳಿಗೂ ಬೇಸರ ತರಿಸಿದೆ. ಮೋಕ್ಷಿತಾ, ಧನರಾಜ್​ ಹಾಗೂ ಚೈತ್ರಾ ಮೂವರಲ್ಲಿ ಮೊದಲಿಗೆ ಮೋಕ್ಷಿತಾ ಸೇವ್ ಆಗಿದ್ದು, ಬಳಿಕ ಧನರಾಜ್​-ಚೈತ್ರಾ ನಡುವೆ ಕಡಿಮೆ ವೋಟ್ ಪಡೆದ ಹಿನ್ನೆಲೆ ಚೈತ್ರಾ ದೊಡ್ಮನೆಯಿಂದ ಈ ವಾರ ಎಲಿಮಿನೇಟ್​ ಆಗಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ ಪ್ರಸಾರವಾಗುವ ವೀಕೆಂಡ್‌ ಸಂಚಿಕೆಯಲ್ಲಿ ಸುದೀಪ್ ಅವರು ಯಾರು ಎಲಿಮಿನೇಟ್​ ಎಂಬ ಬಗ್ಗೆ ಅಧಿಕೃತವಾಗಿ ಹೇಳಲಿದ್ದಾರೆ.

ಇದನ್ನೂ ಓದಿ : ಸಿ.ಟಿ ರವಿ ಕೇಸ್​​ CIDಗೆ ಕೊಟ್ಟಿದ್ಯಾಕೆ? – ಸರ್ಕಾರದ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here