ಶೋಭಿತಾ ಧೂಳಿಪಾಲ ಕಳೆದ ಕೆಲವು ತಿಂಗಳ ಹಿಂದೆ ನಾಗ ಚೈತನ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ನಟಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಟಿ ಬ್ಲೂ ಮತ್ತು ಗ್ರೇ ಎನ್ನುವಂತಹ ಸ್ಪಷ್ಟ ಶೇಡ್ ಇಲ್ಲದ ಒಂದು ಲೆಹೆಂಗಾ ಧರಿಸಿದ್ದಾರೆ. ನೆತ್ತಿ ಬೈತಲೆ ತೆಗೆದು ಸಿಂಪಲ್ ಹೇರ್ ಸ್ಟೈಲ್ ಮಾಡಿಕೊಂಡಿರುವ ಅವರು ಗ್ರ್ಯಾಂಡ್ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಧರಿಸಿಕೊಂಡಿಕೊಂಡಿದ್ದು, ಸಖತ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬಹಳಷ್ಟು ಜನರು ಶೋಭಿತಾ ಅವರ ಡ್ರೆಸ್ ನೋಡಿ ಕಮೆಂಟ್ ಮಾಡಿದ್ದಾರೆ. ಅಕ್ಕಿನೇನಿ ಮನೆಯ ಭಾವಿ ಸೊಸೆ ಹೀಗೆ ಡ್ರೆಸ್ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಶೊಭಿತಾ ಮಾಡರ್ನ್ ಆಗಿ ದುಪಟ್ಟಾ ಇಲ್ಲದೆ ಪೋಸ್ ಕೊಟ್ಟಿದ್ದು ತುಂಬಾ ರಿಚ್ ಆಗಿ ಕಂಡುಬಂದವು.
ನಟಿಯ ಲುಕ್ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿದೆ. ಆದರೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ಗೆ ಮಾತ್ರ ಇದು ಇಷ್ಟವಾಗಿಲ್ಲ. ಅಷ್ಟೊ ದೊಡ್ಡ ಫ್ಯಾಮಿಲಿಯ ಸೊಸೆ ಮರ್ಯಾದೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎಂದು ನೆಟ್ಟಿಗರು ಕಿವಿ ಮಾತು ಹೇಳಿದ್ದಾರೆ.
ಇದನ್ನೂ ಓದಿ : ದಾಖಲೆ ಬೆಲೆಗೆ ‘s/o ಮುತ್ತಣ್ಣ’ ಆಡಿಯೋ ರೈಟ್ಸ್ ಮಾರಾಟ – ಚಿತ್ರದ ಹಾಡುಗಳಿಗೆ ಮನಸೋತ A2 ಸಂಸ್ಥೆ..!