‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಪರೂಪದ ಆಕ್ಟರ್. ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು. ಇಂಥಾ ಡಾ.ಶಿವರಾಜ್ ಕುಮಾರ್ ಅವರಿಗೆ ಈಗ ವಯಸ್ಸು ಅರವತ್ತೇರಡು. ಈ ವಯಸ್ಸಿನಲ್ಲೂ ಶಿವಣ್ಣ ಯಂಗ್ ಅಂಡ್ ಎನರ್ಜಿಟಿಕೆ ಆಗಿದ್ದಾರೆ. ಆದರೆ ಹೊರಜಗತ್ತಿಗೆ ಗೊತ್ತಿಲ್ಲದೆ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಶಿವಣ್ಣಗೆ ಕ್ಯಾನ್ಸರ್ ಇರೋದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳನ್ನ ಚಿಂತೆಗೀಡು ಮಾಡಿದೆ.
ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎನ್ನುವ ಮಾತು ಒಂದಷ್ಟು ಸಮಯದಿಂದ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಶಿವಣ್ಣನೇ ಸ್ಪಷ್ಟನೆ ನೀಡಿ, ನನಗೆ ಹೆಲ್ತ್ ಪ್ರಾಬ್ಲಂ ಇದೆ. ಅದಕ್ಕೆ ಟ್ರೀಟ್ ಮೆಂಟ್ ಕೂಡಾ ಶುರುವಾಗಿದೆ. ಸದ್ಯದಲ್ಲೇ ಒಂದು ಆಪರೇಷನ್ ಮಾಡಿಸಬೇಕಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಆಗಿ ಬರುತ್ತೇನೆ ಎಂದಿದ್ದರು.
ಇದರ ಬೆನ್ನಲ್ಲೇ, ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗ್ತಿರೋದ್ರಿಂದ, ಶಿವಣ್ಣ ತಾವು ನಟಿಸಬೇಕಿದ್ದ ಸಿನಿಮಾಗಳಿಂದ ಹೊರಬಂದಿದ್ದಾರೆ ಅಂತ ಹೇಳಲಾಗ್ತಿದೆ. ಶಿವಣ್ಣನಿಗೆ ಕ್ಯಾನ್ಸರ್ ಇದೆ ಅಂತ ವೆಬ್‌ಪೇಜ್ ಅಂಥೋನಿ ಹೇಳಿರೋ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಈ ಸುದ್ದಿ ಬಗ್ಗೆ ಶಿವಣ್ಣ ಮೊದಲು ಮಾತಾಡಿ, ‘ನನಗೆ ಒಂದು ರೋಗ ಇರೋದು ನಿಜ. ಅದಕ್ಕೆ ಚಿಕಿತ್ಸೆಗಾಗಿ ನಾನು ಅಮೆರಿಕಕ್ಕೆ ಹೋಗ್ತಾ ಇದ್ದೀನಿ. ಆದ್ರೆ ಅದು ಕ್ಯಾನ್ಸರ್ ಅಲ್ಲ. ಆ ರೋಗ ಏನು ಅಂತ ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಫ್ಯಾನ್ಸ್ ಯಾರೂ ಟೆನ್ಶನ್ ತಗೋಬೇಡಿ. ನಾನು ಆರೋಗ್ಯವಾಗೇ ವಾಪಸ್ ಬರ್ತೀನಿ’ ಅಂತ ಹೇಳಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಸಾವಿನಿಂದ ಇನ್ನೂ ಚೇತರಿಸಿಕೊಳ್ಳದ ಕನ್ನಡ ಪ್ರೇಕ್ಷಕರಿಗೆ ಶಿವಣ್ಣನ ಆರೋಗ್ಯದ ಬಗ್ಗೆ ಬರ್ತಿರೋ ಸುದ್ದಿಗಳು ಶಾಕ್‌ಗೆ ಗುರಿಮಾಡಿವೆ. ಅವರು ಆರೋಗ್ಯವಾಗಿ ವಾಪಸ್ ಬರಲಿ ಅಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ : ‘ಟಾಕ್ಸಿಕ್’ ಸಿನಿಮಾ ವಿರುದ್ಧ ಎಫ್ಐಆರ್ಗೆ ತಡೆ ನೀಡಿದ ಹೈಕೋರ್ಟ್..!