ಬಿಗ್ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಬೇರೆ ಬೇರೆ ವಿಭಾಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ 7 ಸ್ಪರ್ಧಿಗಳು ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟ ಶಿಶಿರ್ ಶಾಸ್ತ್ರಿ ಹಾಗೂ ತ್ರಿವಿಕ್ರಮ್ ಅವರು 8 ಹಾಗೂ 9ನೇ ಸ್ಪರ್ಧಿಯಾಗಿ ಬಿಗ್ಬಾಸ್ಗೆ ಬಂದಿದ್ದಾರೆ.
ನಟ ಶಿಶಿರ್ ಶಾಸ್ತ್ರಿ ಅವರು ಕನ್ನಡ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಟ್ಟು 13 ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಟ ತ್ರಿವಿಕ್ರಮ್ ಅವರು ಪದ್ಮಾವತಿ ಸೀರಿಯಲ್‌ನಲ್ಲಿ ಸಾಮ್ರಾಟ್ ಆಗಿ ನಟಿಸಿದ್ದರು.
ನಟ ತ್ರಿವಿಕ್ರಮ್ ಅವರು ಇದೇ ಪದ್ಮಾವತಿ ಸೀರಿಯಲ್ ಮೂಲಕ ಸಾಕಷ್ಟು ಫೇಮಸ್ ಆಗಿದ್ದಾರೆ. ಸದ್ಯ ಈ ಬಾರಿಯ ಬಿಗ್ಬಾಸ್ ಸೀಸನ್ಗೆ ನಟ ಶಿಶಿರ್ ಶಾಸ್ತ್ರಿ ಹಾಗೂ ನಟ ತ್ರಿವಿಕ್ರಮ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚನ ಗ್ರ್ಯಾಂಡ್ ಲುಕ್ಗೆ ಫ್ಯಾನ್ಸ್ ಫಿದಾ – ಈ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ?
Post Views: 63