ಚಿತ್ರದುರ್ಗ : ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಸೆ. 21ರಂದು ಆದೇಶ ಹೊರಬಿದ್ದಿದೆ.
ಇಂದು ಜಿಲ್ಲೆಯ ಹಿರಿಯೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದಿಕ್ಸೂಚಿ ಭಾಷಣ ಹಾಗೂ ಸಂಜೆ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಶರಣ್ ಅವರ ಭಾಷಣ ನಿಗದಿಯಾಗಿತ್ತು. ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನಲೆ ಶರಣ್ ಪಂಪ್ ವೆಲ್ಗೆ ನಿರ್ಬಂಧ ಹೇರಿದ್ದಾರೆ.
ಶರಣ್ ಪಂಪ್ ವೆಲ್ ವಿರುದ್ಧ ರಾಜ್ಯದ ನಾನಾ ಕಡೆ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸೆ.22 ರಿಂದ ಅ.7ರವರೆಗೆ ಜಿಲ್ಲೆಗೆ ಪ್ರವೇಸಿದಂತೆ ನಿರ್ಬಂಧಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಮುನಿರತ್ನ ವಿರುದ್ಧದ ಕೇಸ್ ತನಿಖೆಗೆ ಖಡಕ್ IPS ಅಧಿಕಾರಿಗಳ SIT ತಂಡ ರಚನೆ..!
Post Views: 33