Download Our App

Follow us

Home » ಸಿನಿಮಾ » ಕನ್ನಡ ಚಿತ್ರರಂಗದ ಲೈಂಗಿಕ ಹಿಂಸೆ ತನಿಖೆಗೆ ಎದ್ದ ಕೂಗು – ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ..!

ಕನ್ನಡ ಚಿತ್ರರಂಗದ ಲೈಂಗಿಕ ಹಿಂಸೆ ತನಿಖೆಗೆ ಎದ್ದ ಕೂಗು – ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ..!

ಮಾಲಿವುಡ್‌ನ ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಹಿಂಸೆ ತನಿಖೆಗೆ ಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು (ಸೆ.5) ನಟ ಚೇತನ್ ಅಹಿಂಸಾ ನೇತೃತ್ವದ ‘ಫೈರ್’ ಸಂಸ್ಥೆ ಮೂಲಕ ಮನವಿ ಪತ್ರ ಸಲ್ಲಿಕೆ ಮಾಡಲಾಗಿದೆ.

ಸ್ಯಾಂಡಲ್‌ವುಡ್ ನಟ​ ಕಿಚ್ಚ ಸುದೀಪ್​, ಮೋಹಕ ತಾರೆ ರಮ್ಯಾ, ಪೂಜಾ ಗಾಂಧಿ, ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ನೀತು, ಸಾನ್ವಿ ಶ್ರೀವತ್ಸ ಚೇತನ್ ಅಂಹಿಸಾ ಸೇರಿದಂತೆ 153ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

ಸದ್ಯದಲ್ಲೇ ಸಮಿತಿ ರಚನೆಯ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಸಿಎಂ ‘ಫೈರ್’ ತಂಡಕ್ಕೆ ಭರವಸೆ ನೀಡಿದ್ದಾರೆ. ಸೆ.10ರ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಎಂದು ‘ಫೈರ್’ ತಂಡಕ್ಕೆ ಸಿಎಂ ತಿಳಿಸಿದ್ದಾರೆ. ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಭಾಗಿಯಾಗಿದ್ದರು.

ಮಲಯಾಳಂ ಸಿನಿಮಾ ರಂಗದಲ್ಲಿ ಜಸ್ಟಿಸ್ ಹೇಮಾ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ವಾರದಿಂದ ಮಲಯಾಳಂ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತಿವೆ. ಹಲವರು ತಲೆದಂಡ ಕೂಡ ಆಗಿದೆ. ಕಲಾವಿದರ ಸಂಘದ ಅಧ್ಯಕ್ಷರಿಂದ ಹಿಡಿದು, ಪದಾಧಿಕಾರಿಗಳು ಕೂಡ ರಾಜಿನಾಮೆ ಸಲ್ಲಿಸಿದ್ದಾರೆ. ಈಗ ಅಂಥದ್ದೊಂದು ಕಮಿಟಿಯನ್ನು ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಬೇಕು ಅಂತ ಸ್ಯಾಂಡಲ್‌ವುಡ್​ ಕೂಡ ಒತ್ತಾಯಿಸಿದೆ.

ಇದನ್ನೂ ಓದಿ : ರಾಯಚೂರಿನಲ್ಲಿ ಸ್ಕೂಲ್ ​ಬಸ್​-KSRTC ಬಸ್ ಮಧ್ಯೆ ಭೀಕರ ಅಪಘಾತ – ಇಬ್ಬರು ಮಕ್ಕಳು ದುರ್ಮರಣ..!

Leave a Comment

DG Ad

RELATED LATEST NEWS

Top Headlines

ಪತ್ರಕರ್ತರಿಗೆ ಬೆದರಿಕೆ ಹಾಕಿದರೆ ರೂ. 50,000 ದಂಡ, 3 ವರ್ಷ ಜೈಲು – ಪ್ರಧಾನಿ ಮೋದಿ..!

ಲಕ್ನೋ : ನಮ್ಮ ದೇಶದ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸುವ ಅಥವಾ ಬೆದರಿಕೆ ಹಾಕಲು ಪ್ರಯತ್ನಿಸುವವರಿಗೆ ರೂ. 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಯುಪಿ ಸಿಎಂ

Live Cricket

Add Your Heading Text Here