ಮೈಸೂರು : ಯತ್ನಾಳ್ ಕಾಂಗ್ರೆಸ್ ವಕ್ತಾರರಂತೆ ಮಾತ್ನಾಡುತ್ತಿದ್ದಾರೆ. ವರಿಷ್ಠರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಮೈಸೂರಿನಲ್ಲಿ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಚಾಮುಂಡಿ ದರ್ಶನ ಪಡೆದ ನಂತರ ಗುಡುಗಿದ ರೇಣುಕಾಚಾರ್ಯ, ಯಡಿಯೂರಪ್ಪ, ವಿಜಯೇಂದ್ರ ಅವ್ರನ್ನು ಬೈಯೋದೇ ಯತ್ನಾಳ್ ಕಾಯಕ. ಪಕ್ಷದ ವಿರುದ್ಧವಾಗಿಯೇ ಯತ್ನಾಳ್ ನಡೆದುಕೊಳ್ಳುತ್ತಿದ್ದಾರೆ. ಬೆರಳೆಣಿಕೆಯಷ್ಟು ಬೆಂಬಲಿಗರನ್ನು ಇಟ್ಟುಕೊಂಡು ಟೀಕಿಸುತ್ತಿದ್ದಾರೆ. ಯತ್ನಾಳ್ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆ ಆಗ್ತಾ ಇದೆ ಎಂದು ಚಾಮುಂಡಿ ಬೆಟ್ಟದಲ್ಲಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಇದೀಗ ಯತ್ನಾಳ್ ಉಚ್ಛಾಟನೆ ಸುಳಿವು ಕೊಟ್ಟ ಮಾಜಿ ಮಿನಿಸ್ಟರ್, ನಿನ್ನೆಯೂ ಯತ್ನಾಳ್ ಹಿಂದೂ ಹುಲಿಯಲ್ಲ ಇಲಿ ಎಂದಿದ್ದರು. ವಿಜಯೇಂದ್ರ ಹಾಗೂ ಪಕ್ಷದ ಒಳಿತಿಗಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : ಮಂಡ್ಯ ಆಯ್ತು ರಾಮನಗರ ಮುಗೀತು.. ಈಗ ಹಾಸನದಲ್ಲಿ ನಿಖಿಲ್ ಹವಾ..!
Post Views: 26