ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರಿಗೆ 87 ವರ್ಷ ವಯಸ್ಸಾಗಿತ್ತು.
ಚಿ.ದತ್ತರಾಜ್, ಖ್ಯಾತ ಸಾಹಿತಿ ದಿ.ಚಿ.ಉದಯಶಂಕರ್ ಅವರ ಸಹೋದರ. ಡಾ||ರಾಜಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ನಿರ್ದೇಶಿಸಿ ಗೆದ್ದಿದ್ದರು. ಇನ್ನು ಮಂಜುಳ ನಟನೆಯ ‘ರುದ್ರಿ’ ಚಿತ್ರಕ್ಕೂ ಸಾರಥ್ಯ ವಹಿಸಿದ್ದರು.
ಅಂದಹಾಗೆ ಚಿ. ದತ್ತರಾಜ್ ಖ್ಯಾತ ಸಿನಿಮಾ ಬರಹಗಾರ, ಚಿತ್ರ ಸಾಹಿತಿ ಚಿ. ಉದಯ್ ಶಂಕರ್ ಅವರ ಸಹೋದರ. ಹರಿಶ್ಚಂದ್ರ ಘಾಟ್‌ನಲ್ಲಿ ಚಿ. ದತ್ತರಾಜ್ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೀತಿದೆ. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ : ಕುಡಿದ ಮತ್ತಲ್ಲಿ ಗಲಾಟೆ – ಕುಚಿಕು ಗೆಳೆಯನನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ..!
Post Views: 67