Download Our App

Follow us

Home » ಸಿನಿಮಾ » ಸತೀಶ್ – ರಚಿತಾ ‘ಮ್ಯಾಟ್ನಿ’ ಸಿನಿಮಾಗೆ ಸಿಕ್ತು ಅವರ ಸಾಥ್ : ಡಿಂಪಲ್ ಕ್ವೀಲ್ ಡೆವಿಲ್ ಲುಕ್ ಗೆ ಫಿದಾ ಆದ ಆ ಸೂಪರ್ ಸ್ಟಾರ್..!

ಸತೀಶ್ – ರಚಿತಾ ‘ಮ್ಯಾಟ್ನಿ’ ಸಿನಿಮಾಗೆ ಸಿಕ್ತು ಅವರ ಸಾಥ್ : ಡಿಂಪಲ್ ಕ್ವೀಲ್ ಡೆವಿಲ್ ಲುಕ್ ಗೆ ಫಿದಾ ಆದ ಆ ಸೂಪರ್ ಸ್ಟಾರ್..!

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮ್ಯಾಟ್ನಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮ್ಯಾಟಿ ಸಿನಿಮಾದ ಟ್ರೈಲರ್ ಲಾಂಚ್ ಮಾಡುವ ಮೂಲಕ ಸಿನಿಮಾಗೆ ಸಾಥ್ ನೀಡಿದರು.

ಇಷ್ಟು ದಿನಗಳ ಕಾಲ ತೆರೆ ಮೇಲೆ ಕ್ಯೂಟ್ ಹಾಗೂ ರೋಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸತೀಶ್ ನಿನಾಸಂ ಕೂಡ ಇದೆ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು ಸಿನಿಮಾದಲ್ಲಿ ಯಾರು ಡೆವಿಲ್ ಎನ್ನುವುದು ಕುತೂಹಲ ಮೂಡಿಸಿದೆ.

ಚಿತ್ರದಲ್ಲಿ ಸತೀಶ್, ರಚಿತಾ ರಾಮ್ ಸೇರಿದಂತೆ ಅದಿತಿ ಪ್ರಭುದೇವಾ ಶಿವರಾಜ್ ಕೆಆರ್ ಪೇಟೆ, ನಾಗಭೂಷಣ್, ಪೂರ್ಣ ಮೈಸೂರು, ದಿಗಂತ್ ದಿವಾಕರ್, ತುಳಸಿ ಶಿವರಾಮ್ ತಬಲ ನಾಣಿ ಹೀಗೆ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದಾರೆ. ಇನ್ನು ಮ್ಯಾಟ್ನಿ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಗೌಡ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ , ಸುಧಾಕರ್ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಾಹಣವಿದೆ.

ನೀನಾಸಂ ಸತೀಶ್ ಅವರು ಮಾತನಾಡಿ, ಯಾಕೋ ಮ್ಯಾಟ್ನಿ ಸಿನಿಮಾ ಇನ್ನು ರಿಲೀಸ್ ಮಾಡಿಲ್ಲ ಮೊದಲು ರಿಲೀಸ್ ಮಾಡಿ ಎಂದು ದರ್ಶನ್ ಹೇಳಿದ್ದರು. ಆಗ ಟ್ರೈಲರ್ ಲಾಂಚ್ ಗೆ ಬರಲೇಬೇಕು ಅಂತ ಕೇಳಿಕೊಂಡಿದ್ದೆ. ಮೊದಲು ಸಿನಿಮಾ ಲಾಂಚ್ ಮಾಡಿ ಬರುತ್ತೇನೆ ಅಂದಿದ್ದರು. ರಚಿತಾ ಅವರು ಆಗಲೇ ಮಾತನಾಡಿದ್ದರು. ನಿಮಗಾಗಿ ಹಾಗೂ ರಚಿತಾ ಇದ್ದಾರೆ ಖಂಡಿತ ಬರುತ್ತೇನೆ ಅಂದಿದ್ದರು. ಹಾಗೂ ಗೆಳೆಯ ಡಾಲಿ ಕೂಡ ಇದ್ದಾರೆ. ಮ್ಯಾಟ್ನಿಗೆ ದೊಡ್ಡ ಶಕ್ತಿ ಸಿಕ್ಕಿದೆ, ದೊಡ್ಡ ಮಟ್ಟದಲ್ಲಿ ರೀಚ್ ಆಗಿದೆ’ ಎಂದರು.

ಮ್ಯಾಟ್ನಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಾಲಿ ಧನಂಜಯ್ ಭಾಗಿಯಾಗಿದ್ದರು. ಸಿನಿಮಾದಲ್ಲಿ ರಚಿತಾ ಡೆವಿಲ್ ಲುಕ್ ನೋಡಿ ಡಾಲಿ ಹಾಗೂ ದರ್ಶನ್ ಫಿದಾ ಆಗಿದ್ದಾರೆ.

ವೇದಿಕೆ ಮೇಲೆ ಮಾತನಾಡಿದ ರಚಿತಾ, ‘ನನ್ನ ಸಿನಿಮಾದ ಟ್ರೈಲರ್ ಅನ್ನು ಮೊದಲ ಬಾರಿಗೆ ದರ್ಶನ್ ಸರ್ ಲಾಂಚ್ ಮಾಡ್ತಾ ಇದ್ದಾರೆ. ತುಂಬಾ ಖುಷಿ ಹಾಗೂ ತುಂಬಾ ಹೆಮ್ಮೆಯಾಗುತ್ತೆ. ನಾನು ತೂಗುದೀಪ ಬ್ಯಾನರ್ ನಿಂದ ಲಾಂಚ್ ಆದವಳು. ಹತ್ತು ವರ್ಷದ ಬಳಿಕ ನನ್ನ ಸಿನಿಮಾದ ಟ್ರೈಲರ್ ಲಾಂಚ್ ಗೆ ಬಂದಿದ್ದು ತುಂಬಾ ಖುಷಿಯಾಗುತ್ತೆ. ವೇದಿಕೆ ಮೇಲೆ ಇರುವ ಡಾಲಿ, ಸತೀಶ್, ದರ್ಶನ್ ಸರ್ ಈ ಮೂವರು ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಂಬಾ ಖುಷಿಯಾಗುತ್ತೆ. ಮ್ಯಾಟ್ನಿ ಸಿನಿಮಾ ನೋಡಿ ಎಂದು ಕೇಳಿಕೊಂಡರು.

ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಮ್ಯಾಟ್ನಿ ಸಿನಿಮಾ ಇದೇ 5ನೇ ತಾರೀಖು ಎಲ್ಲಾ ಚಿತ್ರಮಂದಿರಗಳಲ್ಲಿ ಬರುತ್ತಿದೆ. ಮ್ಯಾಟ್ನಿ ಸಿನಿಮಾ ಎಂದ ಮಾತ್ರಕ್ಕೆ ಮ್ಯಾಟ್ನಿ ಟೈಮಲ್ಲಿ ಹೋಗ್ಬೇಡಿ, ಮಾರ್ನಿಂಗ್ ಶೋಗೆ ಹೋಗಿ’ ಎಂದರು. ಇನ್ನು ಸತೀಶ್ ಅವರ ಬಗ್ಗೆ ಮಾತನಾಡಿದ ದರ್ಶನ್, ‘ನೀನಾಸಂನಿಂದ ಬಂದು ಸಿನಿಮಾ ರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಇಲ್ಲಿವರೆಗೂ ಬಂದಿದ್ದಾರೆ. ಈ ಜರ್ನಿ ತುಂಬಾ ದೊಡ್ಡದು. ಇನ್ನು ನಾಯಕಿಯಾಗಿ ಹತ್ತು ವರ್ಷಗಳು ಸಿನಿಮಾರಂಗದಲ್ಲಿ ಇದ್ದು ಜಹಿಸುವುದು ಅಂದ್ರೆ ಸುಮ್ಮನೆ ಅಲ್ಲ. ಶ್ರಮ ಕಾಣುತ್ತಿದೆ’ ಎಂದು ರಚಿತಾ ಅವರ ಬಗ್ಗೆಯೂ ಹೇಳಿದರು.

ಇನ್ನು ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು ಟ್ರೇಲರ್ ಕೂಡ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ. ಏಪ್ರಿಲ್ 5ಕ್ಕೆ ಮ್ಯಾಟ್ನಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ : ಏಪ್ರಿಲ್ 1ರಿಂದ ಮತ್ತೆ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ – ಯಾವ್ಯಾವ ವಾಹನಗಳಿಗೆ ಎಷ್ಟು?

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here