ಬಾಲಿವುಡ್ನ ಸ್ಟಾರ್ ನಟ ಸಂಜಯ್ ದತ್ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಗಾಗ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಸಂಜಯ್ ದತ್ ಇದೀಗ ಮಂಗಳೂರಿನ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ತಮ್ಮ ಕೆಲವು ಗೆಳೆಯರೊಟ್ಟಿಗೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದಿದ್ದ ಸಂಜಯ್ ದತ್ ಅವರು ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗವಹಿಸಿದರು. ಈ ಪೂಜೆಯಲ್ಲಿ ಭಾಗವಹಿಸಲೆಂದೇ ಮುಂಬೈನಿಂದ ಮಂಗಳೂರಿಗೆ ನಟ ಆಗಮಿಸಿದ್ದಾರೆ. ಈ ವೇಳೆ ದೇವಸ್ಥಾನದ ವತಿಯಿಂದ ಸಂಜಯ್ ದತ್ ಅವರನ್ನು ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಿದರು.
ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆಜಿಎಫ್ 2, ಕೆಡಿ ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸಿದ ಬಳಿಕ ಕರ್ನಾಟಕ ಮತ್ತು ಕನ್ನಡ ಸಿನಿಮಾಗಳ ಜೊತೆ ಉತ್ತಮ ನಂಟು ಹೊಂದಿದ್ದಾರೆ. ಸಂಜಯ್ ದತ್ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಸೇರಿ ಒಂದೆರಡು ಪ್ರೊಜೆಕ್ಟ್ ಮಾಡುತ್ತಿದ್ದಾರೆ. ಅದರಲ್ಲಿ ಕೆಡಿ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಬಾಪ್ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಇದನ್ನೂ ಓದಿ : ನಮ್ಮ ಪ್ರೀತಿಗೆ ಭಾಗಿಯಾಗಿ ಚಾಲೆಂಜ್ ಮಾಡಬೇಡಿ – ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್..!
Post Views: 61