ಟಾಲಿವುಡ್ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ಈ ನೋವಿನ ವಿಷಯವನ್ನು ಸ್ವತಃ ಸಮಂತಾ ರುತ್ ಪ್ರಭು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಮಂತಾ ಅವರು , ‘ಮತ್ತೆ ನಾವು ಸಿಗವವರೆಗೆ ಅಪ್ಪ..’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಸದ್ಯ ಸ್ಯಾಮ್ ತಂದೆಯ ಸಾವಿನ ಸುದ್ದಿ ಕೇಳಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ತೆಲುಗು ಆಂಗ್ಲೋ ಇಂಡಿಯನ್ ಆಗಿರುವ ಸಮಂತಾ ತಂದೆ ಜೋಸೆಫ್ ರುತ್ ಪ್ರಭು ಅವರು ಸಮಂತಾ ಅವರ ಜೀವನ ಹಾಗೂ ವೃತ್ತಿ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದರು. ವೃತ್ತಿಪರ ಬದ್ಧತೆಗಳ ಹೊರತಾಗಿಯೂ ಸಮಂತಾ ತನ್ನ ಕುಟುಂಬ ಹಾಗೂ ತಂದೆಯ ಬಗ್ಗೆ ಈ ಹಿಂದೆಯೇ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆದರೆ ಈಗ ಸಮಂತಾ ಅವರ ತಂದೆಯ ಹಠಾತ್ ಸಾವು ಸಮಂತಾ ಅವರ ಅಭಿಮಾನಿಗಳು, ಕುಟುಂಬ ಹಾಗೂ ಪ್ರೀತಿಪಾತ್ರರಲ್ಲಿ ಬೇಸರವನ್ನು ಉಂಟು ಮಾಡಿದ್ದು, ಜೋಸೆಫ್ ರುತ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ : ಬಸನಗೌಡ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ – ಮಾಜಿ ಸಚಿವ ರೇಣುಕಾಚಾರ್ಯ..!