ಬಿಗ್‌ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳು ಒಂದಲ್ಲಾ ಒಂದು ಮನೆಯ ರೂಲ್ಸ್ ಬ್ರೇಕ್ ಮಾಡುತ್ತಲೇ ಇರುತ್ತಾರೆ. ಈ ವಾರ ಕಳಪೆ ಪಟ್ಟ ಪಡೆದು ಜೈಲಿನಲ್ಲಿರುವ ಚೈತ್ರಾ ಹಾಗೂ ತ್ರಿವಿಕ್ರಂ ಈಗ ನಿಯಮವನ್ನು ಬ್ರೇಕ್ ಮಾಡಿದ್ದಾರೆ.
ರಾತ್ರಿ ಎಲ್ಲರೂ ನಿದ್ರಿಸಿದಾಗ ಚೈತ್ರಾ ಹಾಗೂ ತ್ರಿವಿಕ್ರಂ ಜೈಲಿನಿಂದ ಹೊರ ಬಂದಿದ್ದಾರೆ. ಮನೆಯವರಿಗೆ ಏನಾದರೂ ಶಿಕ್ಷೆ ಕೊಡಬೇಕಲ್ಲ ಎಂದು ಚೈತ್ರಾ ಹಾಗೂ ತ್ರಿವಿಕ್ರಂ ನಿರ್ಧರಿಸಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡರೆ ಶಿಕ್ಷೆ ಆಗುತ್ತದೆ ಎಂದು ಭಾವಿಸಿದ ತ್ರಿವಿಕ್ರಂ ಹಾಗೂ ಚೈತ್ರಾ ಕಂಬಿಗಳಿಂದ ನುಸುಳಿ ಹೊರ ಬಂದಿದ್ದಾರೆ.
ಮನೆಯವರಿಂದ ಸಮವಾಗಿ ಕಳಪೆ ಪಟ್ಟವನ್ನು ಸ್ವೀಕರಿಸಿದ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಜೈಲಿಗೆ ಹೋಗಿದ್ದಾರೆ. ಇದು ಮೂರನೇ ಬಾರಿಗೆ ಚೈತ್ರಾ ಕುಂದಾಪುರ ಜೈಲಿಗೆ ಪ್ರವೇಶ ಮಾಡಿದ್ದಾರೆ. ಅಲ್ಲದೇ ತ್ರಿವಿಕ್ರಮ್ ಇದೇ ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಹೀಗೆ ಜೈಲಿಗೆ ಈ ಇಬ್ಬರು ಪ್ರವೇಶ ಮಾಡುತ್ತಿದ್ದಂತೆ ಕ್ಯಾಪ್ಟನ್ ಮುಂದೆಯೇ ಆಚೆ ಬರುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇದನ್ನೇ ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ : ಜಾತಿ-ಜಾತಿಗಳನ್ನು ಒಡೆದು ಬಿಜೆಪಿ ಏಕತೆ ಕದಡುತ್ತಿದೆ – ಸಂಸತ್ತಿನಲ್ಲಿ ಗುಡುಗಿದ ರಾಹುಲ್ ಗಾಂಧಿ..!