Download Our App

Follow us

Home » ಮೆಟ್ರೋ » ದೀಪಾವಳಿಗೆ ಟಿಕೆಟ್ ದರ ಹೆಚ್ಚಳ – ಖಾಸಗಿ ಬಸ್​​​​ಗಳ ಮೇಲೆ RTO ಅಧಿಕಾರಿಗಳಿಂದ ರೇಡ್..!

ದೀಪಾವಳಿಗೆ ಟಿಕೆಟ್ ದರ ಹೆಚ್ಚಳ – ಖಾಸಗಿ ಬಸ್​​​​ಗಳ ಮೇಲೆ RTO ಅಧಿಕಾರಿಗಳಿಂದ ರೇಡ್..!

ಬೆಂಗಳೂರು : ದೀಪಾವಳಿ ರಜೆಗಳು ಸಮೀಪಿಸುತ್ತಿದ್ದಂತೆಯೇ ಖಾಸಗಿ ಬಸ್ ಟಿಕೆಟ್ ದರಗಳು ಗಗನಕ್ಕೇರಿದೆ. ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಖಾಸಗಿ ಬಸ್​ಗಳು 1,000 ರೂ.ನಿಂದ 1,500 ರೂ.ವರಗೆ ಟಿಕೆಟ್ ದರ ವಸೂಲಿ ಮಾಡುತ್ತಿವೆ. ದೀಪಾವಳಿ ಹಬ್ಬದ ಪ್ರಯುಕ್ತ ಟಿಕೆಟ್ ದರವನ್ನು ಹೆಚ್ಚಿಸಿದ್ರೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಾರಿಗೆ ಇಲಾಖೆ ಎಚ್ಚರಿಕೆ ಕೂಡ ನೀಡಿತ್ತು. ಆದರೆ ಖಾಸಗಿ ಬಸ್ ಮಾಲೀಕರು ಆದೇಶಕ್ಕೆ ಕ್ಯಾರೇ ಎನ್ನಲಿಲ್ಲ. ಇದೀಗ ಖಾಸಗಿ ಬಸ್​​​​ಗಳ ಮೇಲೆ RTO ಅಧಿಕಾರಿಗಳ ರೇಡ್ ಮಾಡಿದ್ದಾರೆ.

ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್​​ ನೇತೃತ್ವದಲ್ಲಿ ರೇಡ್​​ ಮಾಡಿದ್ದು, ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಬಸ್​​​​ಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಆನಂದ್​ ರಾವ್​​ ಸರ್ಕಲ್​ ಬಳಿ RTO ಚೆಕ್ಕಿಂಗ್​​ ಮಾಡಿದ್ದು, ಡ್ರೈವರ್​ ಹಾಗೂ ಕಂಡಕ್ಟರ್​​​​ಗೆ RTO ಅಧಿಕಾರಿಗಳು ಕ್ಲಾಸ್​​ ತೆಗೆದುಕೊಂಡಿದ್ದಾರೆ.

ವಾಹನದ FC ಚಾಲಕನ DL ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೇಕಾಬಿಟ್ಟಿ ಟಿಕೆಟ್​​ ದರ ಹೆಚ್ಚಿಸಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದರು. ಹಾಗಾಗಿ ಈ ಸುಲಿಗೆಗೆ ಬ್ರೇಕ್​​​ ಹಾಕಲು RTO ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಖಾಸಗಿ ಬಸ್​ ರೇಟ್​ ಕಿರಿಕ್​​​

  • ಬೆಂಗಳೂರು To ಚೆನ್ನೈ
    ಸಾಮಾನ್ಯ ದಿನಗಳ ದರ 650ರೂ
    ಅಕ್ಟೋಬರ್ 29ದರ 1-500ರಿಂದ 2100
  • ಬೆಂಗಳೂರು To ಬೆಳಗಾವಿ
    ಸಾಮನ್ಯ ದಿನಗಳ ದರ 600ರಿಂದ 800
    ಅಕ್ಟೋಬರ್ 29ರಂದು 1500ರಿಂದ 4000
  • ಬೆಂಗಳೂರು To ಮಂಗಳೂರು
    ಸಾಮಾನ್ಯ ದಿನಗಳ ದರ 560-650ರೂ
    ಅಕ್ಟೋಬರ್ 29ರಂದು 1400ರಿಂದ 2000
  • ಬೆಂಗಳೂರು To ರಾಯಚೂರು
    ಸಾಮಾನ್ಯ ದಿನಗಳ ದರ 650ರಿಂದ 800
    ಅಕ್ಟೋಬರ್ 29ರಂದು 1,400ರಿಂದ 2,100
  • ಬೆಂಗಳೂರು To ಗೋಕರ್ಣ
    ಸಾಮಾನ್ಯ ದಿನಗಳ ದರ 700ರಿಂದ 800
    ಅಕ್ಟೋಬರ್ 29ಕ್ಕೆ 1800ರಿಂದ 2500

ಇದನ್ನೂ ಓದಿ : ಕಲಬುರಗಿಯಲ್ಲಿ ಸರಣಿ ಅಪಘಾತ – ನಾಲ್ವರಿಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here