Download Our App

Follow us

Home » ರಾಜಕೀಯ » ರಾಜ್ಯ ಬಿಜೆಪಿ ನಾಯಕರ ಬಂಡಾಯ ಶಮನಕ್ಕೆ RSS ಎಂಟ್ರಿ – ನಾಳೆ ಮಹತ್ವದ ಸಭೆ..!

ರಾಜ್ಯ ಬಿಜೆಪಿ ನಾಯಕರ ಬಂಡಾಯ ಶಮನಕ್ಕೆ RSS ಎಂಟ್ರಿ – ನಾಳೆ ಮಹತ್ವದ ಸಭೆ..!

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎಂಟ್ರಿ ಕೊಟ್ಟಿದೆ. ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸೆಪ್ಟೆಂಬರ್ 12ರಂದು ರೆಬೆಲ್ & ಅತೃಪ್ತರ ಜೊತೆ RSS ನಾಯಕರ ಸಭೆ ನಡೆಸಲಿದ್ದಾರೆ.

ನಾಳೆ ಚನ್ನೇನಹಳ್ಳಿ RSS ಕಚೇರಿಯಲ್ಲಿ ಬೆಳಗ್ಗೆ 9 ಗಂಟೆಗೆ ಸಭೆ ನಡೆಯುವ ಸಾಧ್ಯತೆಯಿದೆ. ಆರ್​ಎಸ್​​ಎಸ್ ಸರ ಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ನಡೆಯುವ ಬಂಡಾಯ ಶಮನದ ಸಭೆಯಲ್ಲಿ ಬಿ.ಎಲ್. ಸಂತೋಷ್​ ಭಾಗಿ ಸಾಧ್ಯತೆಯಿದೆ.

ಬಿಜೆಪಿಯ ಮೂರು ಬಣಗಳಾದ ಯತ್ನಾಳ್ ಟೀಮ್, ವಿಜಯೇಂದ್ರ‌ ಟೀಂ, ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಇನ್ನು ಈ ಸಭೆಗೆ ಬಿ.ವೈ.ವಿಜಯೇಂದ್ರ, ಆರ್​​.ಅಶೋಕ್​​​, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಯತ್ನಾಳ್, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ. 40ಕ್ಕೂ ಹೆಚ್ಚು ನಾಯಕರನ್ನು ಸಭೆಗೆ ಕರೆದಿರುವ RSS ಪ್ರಮುಖರು, ಬಂಡಾಯದ ಕಾರಣಗಳ ಮಾಹಿತಿ ಸಂಗ್ರಹಿಸಲಿದ್ದಾರೆ.

ಇದನ್ನೂ ಓದಿ : ಓಲಾ ಶೋರೂಂ ಬೆಂಕಿ ಕೇಸ್​ಗೆ ಬಿಗ್​​​ ​ಟ್ವಿಸ್ಟ್ – ಬೈಕ್ ಸರಿಯಾಗಿ ರಿಪೇರಿ ಮಾಡದ್ದಕ್ಕೆ ಶೋರೂಂಗೆ ಬೆಂಕಿ ಹಚ್ಚಿದ ಭೂಪ ಅರೆಸ್ಟ್​​​..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here