Download Our App

Follow us

Home » ಅಂತಾರಾಷ್ಟ್ರೀಯ » 1,788 ರೂಂ, 257 ಸ್ನಾನಗೃಹ – 1174 ಕೋಟಿ ವೆಚ್ಚದ ಅರಮನೆಯಲ್ಲಿ ಮೋದಿಗೆ ರಾಜಾತಿಥ್ಯ..!

1,788 ರೂಂ, 257 ಸ್ನಾನಗೃಹ – 1174 ಕೋಟಿ ವೆಚ್ಚದ ಅರಮನೆಯಲ್ಲಿ ಮೋದಿಗೆ ರಾಜಾತಿಥ್ಯ..!

ಬ್ರೂನೈ : ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಬ್ರೂನೈ ಪ್ರವಾಸ ಕೈಗೊಂಡಿದ್ದು, ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದೆ. ಬ್ರೂನೈ ಸುಲ್ತಾನನಿಂದ ಮೋದಿಗೆ ರಾಜಾತಿಥ್ಯ ದೊರೆತಿದೆ.

ಬ್ರೂನೈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿ ಅವರಿಗೆ ದೊರೆ ಸುಲ್ತಾನ್ ಹಸನಲ್ ಬೊಲ್ತಿಯಾ ಅವರು 1788 ಕೊಠಡಿಗಳನ್ನು ಹೊಂದಿರುವ ಚಿನ್ನದ ಗುಮ್ಮಟದಿಂದ ಕೂಡಿರುವ ತಮ್ಮ ಹಸನಲ್ ಬೊಲ್ತಿಯಾ ವೈಭವೋಪೇತ ಅರಮನೆಯಲ್ಲಿ ಆತಿಥ್ಯ ನೀಡಿದ್ದಾರೆ. ಇದು ವಿಶ್ವದ ಅತಿದೊಡ್ಡ ವಸತಿ ಅರಮನೆಯಾಗಿದ್ದು, 7000 ಐಷಾರಾಮಿ ಕಾರುಗಳನ್ನು ಹೊಂದುವ ಮೂಲಕ ದೊರೆ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ.

ಮೋದಿ ಅವರು ಬಂದಿಳಿಯುತ್ತಿದ್ದಂತೆಯೇ ಅವರನ್ನು ಬ್ರೂನೈ ರಾಜಕುಮಾರಅಲ್-ಮುತ್ತದಿ ಬಿಲ್ಲಾಹ್ ವಿಮಾನ ನಿಲ್ದಾಣಕ್ಕೆ ಬಂದು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಗೌರವ ರಕ್ಷೆ ನೀಡಲಾಯಿತು. ದ್ವಿಪಕ್ಷೀಯ ಭೇಟಿಗಾಗಿ ಬ್ರೂನೈಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ದಾಖಲೆಗೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ಬ್ರೂನೈ ಸುಲ್ತಾನನ ಐಷಾರಾಮಿ ಮನೆಯಲ್ಲಿ ಮೋದಿ ಊಟ ಸವಿಯಲಿದ್ದಾರೆ. ಪ್ರವಾಸದ 2ನೇ ದಿನದಂದು, ಪ್ರಧಾನಿ ಮೋದಿ ಅವರು ಬ್ರೂನೈ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರನ್ನು ಅವರ ಅಧಿಕೃತ ನಿವಾಸ, ವಿಶ್ವದ ಅತಿದೊಡ್ಡ ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ಭೇಟಿಯಾಗಲಿದ್ದಾರೆ. ದಿವಂಗತ ರಾಣಿ ಎಲಿಜಬೆತ್ II ಅವರನ್ನು ಬಿಟ್ಟರೆ, ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ದೊರೆಯಾಗಿರುವ ಎರಡನೇ ಸುಲ್ತಾನ ಇವರಾಗಿದ್ದಾರೆ. ಇವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು.

ಇದನ್ನೂ ಓದಿ : ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ..!

Leave a Comment

DG Ad

RELATED LATEST NEWS

Top Headlines

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬೆಂಗಳೂರು : ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು

Live Cricket

Add Your Heading Text Here