Download Our App

Follow us

Home » ಅಪರಾಧ » ಜೈಲಿನಲ್ಲೇ ದರ್ಶನ್​ ಗ್ಯಾಂಗ್​​ನಿಂದ ರೌಡಿಸಂ – ಫೋಟೋ ತೆಗೆದ ವೇಲುಗೆ ಹಿಗ್ಗಾಮಗ್ಗಾ ಥಳಿಸಿದ ವಿಲ್ಸನ್​ ಗಾರ್ಡನ್ ನಾಗ..!

ಜೈಲಿನಲ್ಲೇ ದರ್ಶನ್​ ಗ್ಯಾಂಗ್​​ನಿಂದ ರೌಡಿಸಂ – ಫೋಟೋ ತೆಗೆದ ವೇಲುಗೆ ಹಿಗ್ಗಾಮಗ್ಗಾ ಥಳಿಸಿದ ವಿಲ್ಸನ್​ ಗಾರ್ಡನ್ ನಾಗ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್ ಬಿಂದಾಸ್ ಆಗಿರುವ ಫೋಟೋ ವೈರಲ್ ಆಗಿದೆ. ಇದರಿಂದ ಗರಂ ಆದ ವಿಲ್ಸನ್​ ಗಾರ್ಡನ್ ನಾಗ ಫೋಟೋ ತೆಗೆದ ವೇಲುಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ಸೆಂಟ್ರಲ್​​ ಜೈಲಿನಲ್ಲೇ ದರ್ಶನ್ ಗ್ಯಾಂಗ್​​ ರೌಡಿಸಂ ನಡೆಸುತ್ತಿದೆ. ವೇಲು ದರ್ಶನ್​ ಫೋಟೋ ತೆಗೆದು ಮೈಸೂರು ಹುಡುಗರಿಗೆ ಕಳಿಸಿದ್ದ. ಫೋಟೋ, ವಿಡಿಯೋ ಲೀಕ್​ ಮಾಡಿದ್ದಕ್ಕೆ ದರ್ಶನ್​ ಫುಲ್​ ಗರಂ ಆಗಿದ್ದು, ಬ್ಯಾರಕ್​​​​ಗೆ ನುಗ್ಗಿ ವಿಲ್ಸನ್​ ಗಾರ್ಡನ್​ ನಾಗಾ ವೇಲುಗೆ ಥಳಿಸಿದ್ದಾನೆ. ಮೈಸೂರು ಹುಡುಗರಿಂದಲೇ ದರ್ಶನ್​​ ಫೋಟೋ ವೈರಲ್​ ಆಗಿದ್ದು, ಚಾಮರಾಜನಗರ ಪೊಲೀಸ್ ಕ್ರೈಂ ಸಿಬ್ಬಂದಿಯೊಬ್ಬರಿಗೆ ಈ ಫೋಟೊ ಸಿಕ್ಕಿತ್ತು. ಫೋಟೋ ಇಟ್ಟುಕೊಂಡು ಡೀಲ್ ಮಾಡಿಕೊಳ್ಳಲು ಯತ್ನಿಸಿರೊ ಶಂಕೆ ಕೂಡ ವ್ಯಕ್ತವಾಗಿದೆ.

ಫೋಟೋ ವಿಚಾರ ಸಿಸಿಬಿ ಪೊಲೀಸರ ಗಮನಕ್ಕೂ ಬಂದಿತ್ತು. ಹೀಗಾಗಿ ಸಿಸಿಬಿ ಪೊಲೀಸರು ಶನಿವಾರ ದಾಳಿ ಮಾಡಿ ಸುಮ್ಮನೆ ವಾಪಸ್ ಬಂದಿದ್ದರು. ಫೋಟೋ ವೈರಲ್​ ಆಗ್ತಿದ್ದಂತೆ ವಿಲ್ಸನ್​​ ಗಾರ್ಡನ್​ ನಾಗಾ ಫುಲ್​ ಸೈಲೆಂಟ್​ ಆಗಿದ್ದಾನೆ. ಫೋಟೋ ತೆಗೆದಿದ್ದು ಮಾರ್ಕೆಟ್​ ವೇಲು ಎಂದು ಗೊತ್ತಾಗಿ ನಾಗಾ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ದರ್ಶನ್​​ನ ತಕ್ಷಣ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ

Live Cricket

Add Your Heading Text Here