ನೆಲಮಂಗಲ : ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳನ ಬಲ ಕಾಲಿಗೆ ದಾಬಸ್ಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಜು ಫೈರಿಂಗ್ ಮಾಡಿದ್ದಾರೆ. ಈ ಘಟನೆ ನೆಲಮಂಗಲ ತಾಲೂಕಿನ ಕಂಬಾಳು ಬಳಿ ನಡೆದಿದೆ.
ಖದೀಮ ಜಯಂತ್ ಬಂಧನ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಹಾಗಾಗಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಜಯಂತ್ ಕೊಲೆ ಯತ್ನ, ದರೋಡೆ ಸೇರಿ ಬರೋಬ್ಬರಿ 53 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಇನ್ನು 2019ರಲ್ಲೂ ದರೋಡೆ ಕೇಸ್ನಲ್ಲಿ ಆರೋಪಿ ಮೇಲೆ ಫೈರಿಂಗ್ ನಡೆದಿತ್ತು. ಆದರೂ ಹಳೆ ಚಾಳಿ ಬಿಡದೆ ದರೋಡೆ ಮುಂದುವರಿಸಿದ್ದ ಜಯಂತ್ಗೆ ಮತ್ತೆ ಗುಂಡೇಟು ಬಿದ್ದಿದೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಖಾಸಗಿ ಬಸ್ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳ ಅರೆಸ್ಟ್..!
Post Views: 180