Download Our App

Follow us

Home » ರಾಷ್ಟ್ರೀಯ » ಇದು ವಿಕಸಿತ ಭಾರತದ ರೋಡ್​​ ಮ್ಯಾಪ್ ​- ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ಗೆ ನಮೋ ಮೆಚ್ಚುಗೆ..!

ಇದು ವಿಕಸಿತ ಭಾರತದ ರೋಡ್​​ ಮ್ಯಾಪ್ ​- ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ಗೆ ನಮೋ ಮೆಚ್ಚುಗೆ..!

ಬೆಂಗಳೂರು : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಇಂದು ಮಂಡಿಸಿದರು. ಈ ಬಜೆಟ್​​​ನಲ್ಲಿ ಕೃಷಿ, ಉದ್ಯೋಗ, ಶಿಕ್ಷಣ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ.

ಬಜೆಟ್​​ ಮಂಡನೆಯ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ಈ ಬಜೆಟ್​​ನಿಂದ ಆರ್ಥಿಕತೆಗೆ ಹೊಸ ಗತಿ ಸಿಗಲಿದೆ. ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಇದರೊಂದಿಗೆ ಶಿಕ್ಷಣ  ಮತ್ತು ಕೌಶಲ್ಯ, ಸಣ್ಣ ಉದ್ಯಮಗಳ ಪ್ರಗತಿ ಹಾಗೂ ಉದ್ಯೋಗಕ್ಕೂ ಅನುಕೂಲವಾಗಲಿದೆ ಎಂದು ಕೇಂದ್ರ ಬಜೆಟ್​ ಅನ್ನು ಪ್ರಧಾನಿ ನರೇಂದ್ರ ಸಮರ್ಥನೆ  ಮಾಡಿಕೊಂಡಿದ್ದಾರೆ.

ಇನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಅವರು,  ಮಧ್ಯಮ ವರ್ಗಕ್ಕೆ ಈ ಬಜೆಟ್​​ ಬೂಸ್ಟ್​ ನೀಡುತ್ತೆ. ದೇಶದ ಪ್ರಗತಿಗೆ ನಿರ್ಮಲಾ ನವಶಕ್ತಿ ಕೊಟ್ಟಿದ್ದಾರೆ ಎಂದಿದ್ದಾರೆ.

ಕೇಂದ್ರ ಬಜೆಟ್​​ನಲ್ಲಿ ಉದ್ಯೋಗ, ಕೃಷಿ, ಕೈಗಾರಿಕೆಗೆ ಆದ್ಯತೆ ಸಿಕ್ಕಿದೆ. ಶಿಕ್ಷಣ, ಸೇವಾ ವಲಯಕ್ಕೆ ಪ್ರೋತ್ಸಾಹ ನೀಡಲಾಗಿದ್ದು, ಮೂಲ ಸೌಕರ್ಯಕ್ಕೆ ಭರಪೂರ ಅವಕಾಶ ದೊರೆತಿದೆ. ಇದು ವಿಕಸಿತ ಭಾರತದ ರೋಡ್​​ ಮ್ಯಾಪ್​ ಎಂದು ನಿರ್ಮಲಾ ಬಜೆಟ್​​ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೇಂದ್ರ ಬಜೆಟ್​​ನಲ್ಲಿ ಗ್ರಾಹಕರಿಗೆ ಗುಡ್​ ನ್ಯೂಸ್ – ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?

Leave a Comment

DG Ad

RELATED LATEST NEWS

Top Headlines

ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ

Live Cricket

Add Your Heading Text Here