ಕ್ರಿಕೆಟರ್ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾರಿಂದ ಬೇರೆಯಾಗಿದ್ದಾರೆ, ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ಸದ್ದು ಮಾಡುತ್ತಿರುವ ಹೊತ್ತಲ್ಲೇ ಮತ್ತೊಬ್ಬ ಸ್ಟಾರ್ ಆಟಗಾರನ ಬಾಳಲ್ಲೂ ಬಿರುಗಾಳಿ ಎದ್ದಿದೆ ಎನ್ನುವ ಸೂಚನೆ ಸಿಕ್ಕಿದೆ. ಹೌದು.. ಕನ್ನಡದ ಹುಡುಗ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಯಿದ್ದು, ಇದಕ್ಕೆ ಪೂರಕವಾಗಿ ಗಂಡ-ಹೆಂಡತಿ ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಈ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಇಬ್ಬರು ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈಗ ಹಬ್ಬಿರುವ ವದಂತಿಗೆ ಈ ಸ್ಟಾರ್ ದಂಪತಿಗಳು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
2019 ರಲ್ಲಿ ಮದುವೆ : ಕನ್ನಡಿಗ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ 2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕರ್ನಾಟಕದವರೇ ಆಗಿರುವ ಆಶ್ರಿತಾ ತಮಿಳು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಮದುವೆಯ ನಂತರ, ಅವರು ಅನೇಕ ಬಾರಿ ಐಪಿಎಲ್ ಪಂದ್ಯಗಳಲ್ಲಿ ತನ್ನ ಪತಿಯನ್ನು ಬೆಂಬಲಿಸಲು ಮೈದಾನಕ್ಕೆ ಬಂದಿದ್ದರು. ಆದರೆ ಐಪಿಎಲ್ 2024ರ ಸಮಯದಲ್ಲಿ ಅವರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಮನೀಶ್ ಪಾಂಡೆ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಆ ಸೀಸನ್ನಲ್ಲಿ ಕೋಲ್ಕತ್ತಾ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದಾದ ನಂತರವೂ ಆಶ್ರಿತಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ.
ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಪಡೆದುಕೊಂಡಿದ್ದು ಭಾರಿ ಸದ್ದು ಮಾಡಿತ್ತು, ಅದೇ ರೀತಿ ಈ ವರ್ಷದ ಆರಂಭದಲ್ಲೇ ಇಬ್ಬರು ಕ್ರಿಕೆಟಿಗರ ಬಗ್ಗೆ ಈ ರೀತಿ ಸುದ್ದಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇದನ್ನೂ ಓದಿ : ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ – 11 DySP, 41 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ..!