ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್ & ಗ್ಯಾಂಗ್ ವಿರುದ್ಧ ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ಇಲ್ಲಿಯವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂಧರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳಿಂದ 17 ಆರೋಪಿತರ ವಿರುದ್ಧ ಮಾನ್ಯ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.
173(8) CRPC ಅಡಿಯಲ್ಲಿ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ನಲ್ಲಿ ಹಲವು ಮಹತ್ವದ ಮಾಹಿತಿಗಳು ಉಲ್ಲೇಖವಿದೆ. ಒಟ್ಟು 231 ಸಾಕ್ಷಿಗಳನ್ನು ಮಾಡಿರುವ ಪೊಲೀಸರು 8 ಪ್ರಮುಖ ಸಾಕ್ಷಿಗಳನ್ನು ಉಲ್ಲೇಖಿಸಿದ್ದಾರೆ.
ದರ್ಶನ್ ಕೇಸ್ನಲ್ಲಿ ಯಾರ್ಯಾರು ವಿಟ್ನೆಸ್ ಗೊತ್ತಾ :
- ಪೋಸ್ಟ್ ಮಾರ್ಟಂ ಮಾಡಿದ ಸರ್ಕಾರಿ ಡಾಕ್ಟರ್ಗಳು-
- ಪೋಸ್ಟ್ ಮಾರ್ಟಂ ವೇಳೆ ಹಾಜರಿದ್ದ ತಹಶೀಲ್ದಾರ್-
- ಕಾರ್, ಆಟೋ ಸೀಜ್ ಮಾಡಿದ್ರೀದ RTO ಅಧಿಕಾರಿಗಳು-
- ಶೆಡ್, ರಾಜಕಾಲುವೆ ಪರಿಶೀಲನೆ ವೇಳೆ ಹಾಜರಿದ್ದ BBMP ಎಂಜಿನಿಯರ್ಸ್-
- ಮಹಜರ್, ಸ್ಟೇಟ್ಮೆಂಟ್ ಹೀಗೆ ಹಲವು ಪ್ರಕ್ರಿಯೆಯಲ್ಲಿದ್ದ 56 ಪೊಲೀಸರು-
- ಮೂವರು ಐ ವಿಟ್ನೆಸ್( ಪ್ರತ್ಯಕ್ಷ ಸಾಕ್ಷಿಗಳು)
- CRPC 161ನಲ್ಲಿ 70 ಸಾಕ್ಷಿಗಳು, 164ನಲ್ಲಿ 27 ಸಾಕ್ಷಿಗಳು-
- 59 ಮಂದಿ ಪಂಚರನ್ನೂ ಸಾಕ್ಷಿ ಮಾಡಿರುವ ಪೊಲೀಸರು-
ಇದನ್ನೂ ಓದಿ : ಕೋಲಾರ : ಗುಜರಿ ಗೋಡೌನ್ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ನಷ್ಟ..!