ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿ ವಿರುದ್ಧ ಇಂದು ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ರೆಡಿ ಮಾಡಿದ್ದು, ಒಟ್ಟು 231 ಸಾಕ್ಷಿಗಳ ಸಹಿತವಾಗಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಪೊಲೀಸರು ಕೋರ್ಟ್ಗೆ 3991 ಪುಟಗಳ, 66ಕ್ಕೂ ಅಧಿಕ ಎವಿಡಿಯನ್ಸ್ ಹೊದಿರುವ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ಮೂವರು ಪ್ರತ್ಯಕ್ಷ ದರ್ಶಿಗಳ ಸಾಕ್ಷಿ, 56 ಪೊಲೀಸರ ಸಾಕ್ಷಿಗಳಿವೆ. ಹೈದ್ರಾಬಾದ್, ಬೆಂಗಳೂರಿನಲ್ಲಿ ಮಾಡಿಸಿದ್ದ FSL ಟೆಸ್ಟ್ ರಿಪೋರ್ಟ್ ಕೂಡ ಇದ್ದು, CCTV DVR, ಫೋನ್ ಕಾಲ್ಗಳ CDR ಕೋರ್ಟ್ಗೆ ಸಲ್ಲಿಕೆಯಾಗಿದೆ.
ಪೋಸ್ಟ್ ಮಾರ್ಟಂ ರಿಪೋರ್ಟ್, ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಕೂದಲು, ಉಗುರು, ರಕ್ತದ ಕಲೆಯ ಬಟ್ಟೆಗಳ ರಿಪೋರ್ಟ್ ಸಲ್ಲಿಕೆಯಾಗಿದೆ. ಚಾರ್ಜ್ಶೀಟ್ಲ್ಲಿ ದರ್ಶನ್ ಆಪ್ತ ಚಿಕ್ಕಣ್ಣ ಸೇರಿ ಸಾಕ್ಷಿಗಳ 164 ಹೇಳಿಕೆ ಹಾಗೂ ಆರೋಪಿಗಳು ನೀಡಿರುವ ಹೇಳಿಕೆಗಳಿದೆ.
ಇದನ್ನೂ ಓದಿ : ದಿಢೀರ್ ಟಿವಿ ಬೇಕು ಅಂತ ಬೇಡಿಕೆ ಇಟ್ಟ ದರ್ಶನ್ – ಹೆಚ್ಚಿತು ಚಾರ್ಜ್‌ಶೀಟ್ ಟೆನ್ಷನ್..!