ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ. ಇದೀಗ ಮಗನ ಕೊನೆಯ ಕ್ಷಣದ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಬಿಟಿವಿ ಮುಂದೆ ಕಣ್ಣೀರು ಹಾಕಿದ್ದಾರೆ.
ಬಿಟಿವಿ ಮುಂದೆ ಕಣ್ಣೀರು ಹಾಕಿದ ಕಾಶಿನಾಥ್ ಶಿವನಗೌಡರ್ ಅವರು, ಫೋಟೋ ನೋಡಿ ನನ್ನ ಜೀವವೇ ನಿಂತಂತಾಯ್ತು. ನನ್ನ ಮಗ ಎಷ್ಟು ಕಿರುಚಾಡಿದ್ದಾನೋ.. ಎಷ್ಟು ಒದ್ದಾಡಿದ್ದಾನೋ?
ನನ್ನ ಕಂದ ಎಷ್ಟು ನೋವು ಅನುಭವಿಸಿದ್ದಾನೋ? ದರ್ಶನ್ ನಿಜ ಜೀವನದ ರಾಕ್ಷಸ, ನಾಯಕನಲ್ಲ ಖಳನಾಯಕ. ದರ್ಶನ್ ಬೆನ್ನಿಗೆ ನಿಂತಿರೋ ಫ್ಯಾನ್ಸ್ಗಳು ಈಗ್ಲಾದ್ರೂ ಯೋಚಿಸಿ ಎಂದಿದ್ದಾರೆ.
ದೈನೇಸಿ ಬೇಡಿಕೊಂಡರೂ ಬಿಟ್ಟಿಲ್ಲ. ನನ್ನ ಪತ್ನಿ ಗರ್ಭಿಣಿ ಅಂದ್ರೂ ಕರುಣೆ ಬಂದಿಲ್ಲ. ಎಳ್ಳಷ್ಟೂ ಕನಿಕರ ತೋರಿಸದೇ ಬಡಿದಿದ್ದಾರೆ. ನಾವು ಸುಧಾರಿಸಿಕೊಳ್ಳೋ ಹೊತ್ತಲ್ಲೇ ಆಘಾತ ಆಯ್ತು. ಒಬ್ಬರಲ್ಲೂ ಸ್ವಲ್ಪನಾದ್ರೂ ಕರುಣೆ, ಮಾನವೀಯತೆ ಇರಲಿಲ್ವಾ? ಫೋಟೋ ನೋಡಿ ನನಗೆ ದಿಗ್ಬ್ರಮೆ ಆಗ್ತಾ ಇದೆ. ನನ್ನ ಸೊಸೆ ಇದೆಲ್ಲಾ ನೋಡಿ ಹೇಗೆ ತಡೆದುಕೊಂಡಿದ್ದಾಳೋ. ದರ್ಶನ್ ದೇವರಾಗೋ ಬದಲು ರಾಕ್ಷಸನಾಗಿಬಿಟ್ರು ಎಂದು ಕಣ್ಣೀರಿಟ್ಟಿದ್ದಾರೆ.
ಅಭಿಮಾನಿಗಳಿಗೆ ಕೈಮುಗಿದು ಕೇಳ್ಕೋತೀನಿ. ಅತ್ತೂ-ಅತ್ತೂ ನಮ್ಮ ಕಣ್ಣಲ್ಲಿ ನೀರು ಬತ್ತಿ ಹೋಗಿದೆ. ಪವಿತ್ರಾ ಹೆಣ್ಣಲ್ಲ.. ಅವಳೊಬ್ಬ ಹೆಣ್ಣು ರಾಕ್ಷಸಿ. ನನ್ನ ಮಗ ಹೇಗೆ ಒದ್ದಾಡಿ ಸತ್ತನೋ ಅಂತಾ ಶಿಕ್ಷೆ ಇವರಿಗೂ ಆಗ್ಲಿ. ದರ್ಶನ್, ಪವಿತ್ರಾಗೌಡ ಇಂಥಾ ಕ್ರೌರ್ಯವನ್ನು ಅನುಭವಿಸಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ : ಪ್ರವೀಣ್ ತೇಜ್-ಅಂಜಲಿ ಅನಿಶ್ ನಟನೆಯ ‘ಜಂಬೂ ಸರ್ಕಸ್’ ಚಿತ್ರದ ಟ್ರೈಲರ್ ರಿಲೀಸ್..!