Download Our App

Follow us

Home » ಅಪರಾಧ » ಪವಿತ್ರಾಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ – ಸಿಕ್ತು ಮಹತ್ವದ ಸಾಕ್ಷಿ..!

ಪವಿತ್ರಾಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ – ಸಿಕ್ತು ಮಹತ್ವದ ಸಾಕ್ಷಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂಬರ್​ ಒನ್​ ಆರೋಪಿ ಪವಿತ್ರಾಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪವಿತ್ರಾ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ.

ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಸಾಬೀತಾಗಿದೆ.

ಇನ್ನು ಪವಿತ್ರಾಗೌಡ ವಿರುದ್ಧ ಈ ಚಪ್ಪಲಿ ಪ್ರಬಲ ಸಾಕ್ಷಿಯಾಗಲಿದೆ. ಪಟ್ಟಣಗೆರೆ ಶೆಡ್‌ಗೆ ಹೋಗಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಆರೋಪ ಪವಿತ್ರಾ ಮೇಲಿತ್ತು. ಶೆಡ್​ಗೆ ಎಂಟ್ರಿ ಕೊಡ್ತಲೇ ಚಪ್ಪಲಿಯಿಂದ ಪವಿತ್ರಾಗೌಡ ರೇಣುಕಾಸ್ವಾಮಿಗೆ ಹೊಡೆದಿದ್ದಳು. ಈಗ ಅದೇ ಚಪ್ಪಲಿ ಮೇಲೆ ಕೊಲೆಯಾದ ರೇಣುಕಾಸ್ವಾಮಿಯ ರಕ್ತದ ಕಲೆ ಇರುವುದು ತಿಳಿದುಬಂದಿದೆ.

ಸದ್ಯ ಶೇ.70ರಷ್ಟು ಸ್ಯಾಂಪಲ್ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ. ತನಿಖಾ ತಂಡ ಎಲ್ಲಾ FSL ಮಾದರಿ ಪರಿಶೀಲನೆ ನಡೆಸುತ್ತಿದ್ದು, ಪವಿತ್ರಾ ಅಲ್ಲದೇ ಇತರ ಆರೋಪಿಗಳ ಚಪ್ಪಲಿಯಲ್ಲೂ ರಕ್ತದ ಕಲೆ ಪತ್ತೆಯಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ಹುಲ್ಲು ಬೆಳೆದಿರೋದ್ರಿಂದ ಆರೋಪಿಗಳ ಫುಟ್ ಪ್ರಿಂಟ್ ಪತ್ತೆಯಾಗಿರಲಿಲ್ಲ. ಸದ್ಯ ಪೊಲೀಸರು ಫುಟ್​ ಪ್ರಿಂಟ್​ ಕೂಡಾ ರವಾನೆ ಮಾಡಿ ವರದಿ ಪಡೆದಿದ್ದಾರೆ. ಪವಿತ್ರಾ ಸೇರಿ ಹಲವರು ಕೊಲೆಯಲ್ಲಿ ಭಾಗಿಯಾಗಿರೋದಕ್ಕೆ ಇವೆಲ್ಲ ಪ್ರಬಲ ಸಾಕ್ಷಿಯಾಗಲಿದೆ.

ಇದನ್ನೂ ಓದಿ : ಬೆಂಗಳೂರು : ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು – ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ಮಂಗಳೂರಲ್ಲಿ ಕಿಡಿಗೇಡಿಗಳಿಂದ ಪ್ರಾರ್ಥನಾ ಸ್ಥಳದ ಮೇಲೆ ಕಲ್ಲೆಸೆತ – ಕರಾವಳಿಯ ಅಲ್ಲಲ್ಲಿ ಪರಿಸ್ಥಿತಿ ಉದ್ವಿಗ್ನ..!

ಮಂಗಳೂರು : ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಿನ್ನೆ ರಾತ್ರಿ ಪ್ರಾರ್ಥನಾ ಸ್ಥಳದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ. ಕಾಟಿಪಳ್ಳ 3ನೇ

Live Cricket

Add Your Heading Text Here