ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬರೀ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಕಿತ್ತೆಸಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆ ವೇಳೆ ಕಿಡಿಕಾರಿದ್ದಾರೆ.
ಮುಡಾ ಹಗರಣದ ವಿರುದ್ದ ಇಂದಿನಿಂದ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಜೆಡಿಎಸ್ ಜಂಟಿ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಬಿಡದಿ ಚನ್ನಪಟ್ಟಣದಲ್ಲೇ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಲಿ. ನನ್ನ ಆಸ್ತಿ ಬಗ್ಗೆ ಡಿಕೆಶಿ ಪ್ರಶ್ನಿಸಿದ್ದಾರೆ ಅದಕ್ಕೂ ಉತ್ತರ ಕೊಡ್ತೇನೆ.ಅವ್ರ ಆಸ್ತಿ ಬಗ್ಗೆಯೇ ಅವರ ಗುರುಗಳು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ ಎಂದಿದ್ದಾರೆ.
ಸಿಎಂ ಅವ್ರೇ ಎಷ್ಟು ಸೈಟ್ ಬೇಕಾದ್ರೂ ತಗೊಳಿ ನ್ಯಾಯುತವಾಗಿ ತಗೊಳಿ. ಸರ್ಕಾರ ಜಮೀನು ನಿಮ್ಮ ಬಾಮೈದನಿಗೆ ರಿಜಿಸ್ಟರ್ ಮಾಡಿಕೊಟ್ರಿ. ಮುಡಾದ ಅಕ್ರಮ ನಿಮ್ಮ ಗಮನಕ್ಕೆ ಬರಲಿಲ್ವಾ?
ಬಿಎಸ್‌ವೈ ಜೊತೆಗಿನ ಸರ್ಕಾರ ಮುಂದುವರೆದ್ರೆ ಕಾಂಗ್ರೆಸ್ ಇರ್ತಿಲಿಲ್ಲ. ಕುಮಾರಸ್ವಾಮಿನ ಸಿಎಂ ಮಾಡಿದ್ದು ನಾವು ಅಂತೀರಾ? ನಾನು ಅರ್ಜಿ ಹಾಕಿದ್ನಾ? ನಮ್ಮ ಮನೆ ಬಾಗಿಲಿಗೆ ಬಂದು, ಬೇಡ ಅಂದ್ರು ಅಧಿಕಾರ ಕೊಟ್ರಿ. ಆ ನಂತ್ರ ಯಾವ ರೀತಿ ನಡೆಸಿಕೊಂಡ್ರಿ ಪರಮೇಶ್ವರ್ ಅವರೇ ಎಂದು ಗುಡುಗಿದ್ದಾರೆ.
ಇನ್ನು ದೇವೇಗೌಡರಿಗೆ ಅಧಿಕಾರ ಕೊಟ್ಟಿದ್ದು15 ಪಕ್ಷಗಳು, ಇಳಿಸಿದ್ದು ನೀವು. ಕಾಂಗ್ರೆಸ್ ಇನ್ನು 10 ವರ್ಷ ಇರುತ್ತೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇನ್ನು 10 ತಿಂಗಳು ಮುಂದುವರೆಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : ಪಿಎಸ್ಐ ಪರಶುರಾಮ್ ಸಾವಿನ ಕೇಸ್ ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ..!