ಕನ್ನಡದ ಸ್ಟಾರ್ ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಬಿಡುಗಡೆ ಅಗಿರುವ ‘ಕಾಟನ್ ಕ್ಯಾಂಡಿ’ ಪಾರ್ಟಿ ಸಾಂಗ್ ಬಗ್ಗೆ ಆರೋಪ ಮಾಡಲಾಗಿದ್ದು, ಆ ಟ್ಯೂನ್ ಕದ್ದಿದ್ದು ಎನ್ನಲಾಗಿದೆ. 6 ವರ್ಷಗಳ ಹಿಂದೆಯೇ ‘ವೈ ಬುಲ್ ಪಾರ್ಟಿ’ ಅನ್ನೋ ಸಾಂಗ್ ಮಾಡಿದ್ದ ಯುವರಾಜ್ ಇದೀಗ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಕ್‌ಸ್ಟಾರ್ ಯುವರಾಜ್ ‘ಕಾಟನ್ ಕ್ಯಾಂಡಿ’ ಟ್ಯೂನ್ ನನ್ನ ಈ ಹಿಂದಿನ ಪಾರ್ಟಿ ಸಾಂಗ್ ಟ್ಯೂನ್ನಂತೇಯೆ ಇದ್ದು, ಹಾಗಾಗಿ ದೂರು ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ನಟ-ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ‘ಕಾಟನ್ ಕ್ಯಾಂಡಿ’ ಸದ್ಯ ಟ್ರೆಂಡಿಂಗ್ನಲ್ಲಿದೆ. ‘ಕಾಟನ್ ಕ್ಯಾಂಡಿ’ ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ. ಮೇಡ್ ಫಾರ್ ಈಚ್ ಅದರ್’ ಎಂಬಂತೆ ಚಿಂದಿ ಮಾಡಿದ್ದಾರೆ.
ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ ರಿಲೀಸ್ ಆಗಿದೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಈ ಸಾಂಗ್ನಲ್ಲಿದೆ ಎನ್ನಬಹುದು. ಏಕೆಂದರೆ, ಈ ವಿಡಿಯೋವನ್ನು ಹೆಚ್ಚು ಅದ್ದೂರಿಯಾಗಿ ಶೂಟ್ ಮಾಡಲಾಗಿದೆ. ಈ ಸಾಂಗ್‌ಗೆ ಹೆಚ್ಚಿನ ತಯಾರಿ ಮಾಡಿಕೊಂಡಿದ್ದ ಚಂದನ್ ಶೆಟ್ಟಿ, ಈ ಮ್ಯೂಸಿಕ್ ವಿಡಿಯೋವನ್ನು ಸ್ವತಃ ಅವರೇ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ : ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ‘ಗರಿವಿಡಿ ಲಕ್ಷ್ಮೀ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್!