ಬೆಂಗಳೂರು : ಬಾಂಬ್ ಸ್ಫೋಟದಿಂದಾಗಿ ಮುಚ್ಚಲ್ಪಟ್ಟಿದ್ದ ರಾಮೇಶ್ವರಂ ಕೆಫೆ ಮತ್ತೆ ಓಪನ್ ಆಗುತ್ತಿದೆ. ಒಂದು ವಾರದ ಬಳಿಕ ಕಾರ್ಯಾರಂಭಕ್ಕೆ ಕೆಫೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಶಿವರಾತ್ರಿ ದಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಪೂಜೆ ನಡೆಯಲಿದೆ.
ರೀ ಓಪನ್‌ಗೆ ಸಿದ್ಧವಾಗಿರುವ ಕೆಫೆಯನ್ನು ಸಿಬ್ಬಂದಿ ತಳಿರು ತೋರಣಗಳಿಂದ ಅಲಂಕರಿಸಿದ್ದಾರೆ. ರಾಮೇಶ್ವರಂ ಕೆಫೆ ನಾಳೆ ಗ್ರಾಹಕರ ಸೇವೆಗೆ ತೆರೆದುಕೊಳ್ಳಲಿದ್ದು, ಈಗಾಗಲೇ ಕೆಫೆಯನ್ನು ಮಾಲೀಕರು ಸಂಪೂರ್ಣ ಆಲ್ಟ್ರೇಷನ್ ಮಾಡಿದ್ದಾರೆ. ಕೆಫೆಯ ಎಂಟ್ರೆನ್ಸ್ನಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿದ್ದು, ಹ್ಯಾಂಡ್ ಡಿಟೆಕ್ಟರ್ ಮೂಲಕ ಪ್ರತಿ ಗ್ರಾಹಕರ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಿಬ್ಬಂದಿ ಚೆಕ್ ಮಾಡಿ ಪ್ರವೇಶಕ್ಕೆ ಅನುವು ಮಾಡಿಕೊಡಲಿದ್ದು, ಕೆಫೆಯ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲೇ ಪೂಜಾ ಕಾರ್ಯಕ್ರಮ ಆರಂಭಗೊಂಡಿದೆ.
ಇದನ್ನೂ ಓದಿ : ಪೋಕ್ಸೋ ಕಾಯ್ದೆಯಡಿ ಹಂಗರಹಳ್ಳಿ ಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮೀಜಿ ಅರೆಸ್ಟ್..!