Download Our App

Follow us

Home » ಸಿನಿಮಾ » ನಟಿ ರಕ್ಷಿತಾಗೆ ಅವಮಾನ – ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಸೆಟ್‌ನಿಂದ ಹೊರ ನಡೆದಿದ್ದೇಕೆ ಕ್ರೇಜಿ ಕ್ವೀನ್?

ನಟಿ ರಕ್ಷಿತಾಗೆ ಅವಮಾನ – ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಸೆಟ್‌ನಿಂದ ಹೊರ ನಡೆದಿದ್ದೇಕೆ ಕ್ರೇಜಿ ಕ್ವೀನ್?

ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ನಟಿಯಾಗಿ, ನಿರ್ಮಾಪಕಿಯಾಗಿ, ತೀರ್ಪುಗಾರ್ತಿಯಾಗಿ ಕರ್ನಾಟಕದ ಜನತೆಯ ಮನ ಗೆದಿದ್ದಾರೆ. ಈವರೆಗೂ ಸಿನಿಮಾ ತಂಡದಿಂದ ಅಥವಾ ಶೂಟಿಂಗ್‌ ಸೆಟ್‌ನಲ್ಲಿ ಎಂದೂ ಕಹಿ ಘಟನೆ ನಡೆದಿಲ್ಲ ಎಂದಿರುವ ನಟಿ ರಕ್ಷಿತಾ, ಇತ್ತೀಚಿಗೆ ತಮ್ಮ ಜೀವನದ ಮರೆಯಲಾಗದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ.

ಹೌದು, ಖಾಸಗಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತಮ್ಮ ತಂದೆ ಅಗಲಿದ ಮೂರೇ ದಿನಕ್ಕೆ ಶೂಟಿಂಗ್‌ ಸೆಟ್‌ಗೆ ಕಾಲಿಟ್ಟಾಗ ಖ್ಯಾತ ನಿರ್ದೇಶಕರು ಮಾಡಿದ ಅವಮಾನವನ್ನು ನಟಿ ರಕ್ಷಿತಾ ಪ್ರೇಮ್ ರಿವೀಲ್ ಮಾಡಿದ್ದಾರೆ.

2004ರಲ್ಲಿ ನನ್ನ ತಂದೆ ಆರೋಗ್ಯ ಗಂಭೀರವಾಗಿತ್ತು. ಆಗ ನನ್ನ ಕೈಯಲ್ಲಿ ದೊಡ್ಡ ಪ್ರಾಜೆಕ್ಟ್‌ ಇತ್ತು. ಈಗಲೂ ನೆನಪಿದೆ ಶೂಟಿಂಗ್ ಮುಗಿಸಿಕೊಂಡು ಅದೇ ಮೇಕಪ್‌ನಲ್ಲಿ ನನ್ನ ತಂದೆಯನ್ನು ನೋಡಲು ನಾನು ಆಸ್ಪತ್ರೆಗೆ ಹೋಗುತ್ತಿದ್ದೆ. ತಂದೆ ಕಷ್ಟ ಪಟ್ಟು ಉಸಿರಾಡುತ್ತಿರುವುದು ನನಗೆ ಐಸಿಯುಯಿಂದ ಹೊರಗೆ ಕೇಳಿಸುತ್ತಿತ್ತು. ಅವರು ಅಗಲಿದ ದಿನ ಅವರ ಮುಖವನ್ನು ಗಮನಿಸುತ್ತಿದೆ. ಆಗ ಅರ್ಥವಾಗಿತ್ತು ಇದು ಜೀವನ ಅಂದ್ರೆ.. ಏನೇ ಸ್ಟಾರ್ ಸಾಧನೆ ಮಾಡಿದರೂ ಸಾಯುವಾಗ ಏನೂ ಎತ್ತಿಕೊಂಡು ಹೋಗಲ್ಲ ಅಂತ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ‘ತಂದೆ ಅಗಲಿದ ಮೂರನೇ ದಿನಕ್ಕೆ ಹಾಲು ತುಪ್ಪ ಹಾಕಿ ಶೂಟಿಂಗ್‌ ಮಾಡಲು ಹೋಗಿದ್ದೆ. ಆಗ ಅಲ್ಲಿದ್ದ ನಿರ್ದೇಶಕರೊಬ್ಬರು ‘ಏನು ಅವಳು ಅಪ್ಪ ಸತ್ತೋದರೆ ನಾವು ಶೂಟಿಂಗ್ ನಿಲ್ಲಿಸಬೇಕಾ? ಪ್ರೊಡ್ಯೂಸರ್ ದುಡ್ಡು ಹೋಗುತ್ತಿಲ್ವಾ?’ ಎಂದು ಹೇಳಿದರು. ಅದೇ ಮೊದಲು ನಾನು ಶೂಟಿಂಗ್‌ ಸೆಟ್‌ನಿಂದ ಹೊರ ನಡೆದಿದ್ದು, ನಿರ್ಮಾಪಕರಿಗೆ ತಕ್ಷಣವೇ ಕರೆ ಮಾಡಿ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದೆ’ ಎಂದು ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ರಕ್ಷಿತಾ ಪ್ರೇಮ್ ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ‘ಸುವರ್ಣ ಸೆಲೆಬ್ರಿಟಿ ಲೀಗ್’..!

 

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here