ಬೆಂಗಳೂರು : ರಾಜಾಜಿನಗರದ ಯುವತಿ ಆತ್ಮಹತ್ಯೆ ಕೇಸ್ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿ ಮೊಬೈಲ್ ಪೌಚ್ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ನಲ್ಲಿ ಮೃತ ಪ್ರಿಯಾಂಕ ತನ್ನ ಸಾವಿನ ಕಾರಣದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಪ್ರಿಯಾಂಕ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮೃತದೇಹ ಪರಿಶೀಲನೆ ವೇಳೆ ಡೆತ್ ನೋಟ್ ಪತ್ತೆಯಾಗಿದೆ. ಪ್ರೀಯಾಂಕ ತಂದೆಯ ಸಹೋದರ ಯತಿರಾಜ್ ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದ್ದು, ಇಂಗ್ಲೀಷ್ನಲ್ಲಿ ಒಂದು ಪೇಜ್ ಬರೆದಿದ್ದರು.
ತಾನು ದಿಗಂತ್ಗೆ ಸುಮಾರು 15 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ಕೊಟ್ಟಿದ್ದೆ. ಆತ ನನಗೆ ವಾಪಸ್ ಕೊಡದೆ ಸತಾಯಿಸಿದ್ದ. ನನ್ನ ಬಗ್ಗೆ ಬೇರೆಯವರ ಹತ್ತಿರ ಕೆಟ್ಟದಾಗಿ ಹೇಳಿಕೊಂಡು ನನಗೆ ಮಾನಸಿಕ ಕಿರುಕುಳ ನೀಡಿದ್ದ. ನನ್ನ ಸಾವಿಗೆ ದಿಗಂತೇ ಕಾರಣ ಎಂದು ಪ್ರಿಯಾಂಕ ಡೆತ್ ನೋಟ್ನಲ್ಲಿ ಬರೆದಿದ್ದಾಳೆ.
ಪ್ರಕರಣದ ಹಿನ್ನೆಲೆ : ಆತ್ಮಹತ್ಯೆಗೆ ಶರಣಾದ ಪ್ರಿಯಾಂಕಾ (19) ಎಂಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ದಿಗಂತ್ ಎಂಬ ಯುವಕ ಪ್ರಿಯಾಂಕಾಗೆ ಹಣ ಡಬ್ಬಲ್, BMW ಕಾರು ಕೊಡಿಸುವ ಆಸೆ ತೋರಿಸಿದ್ದ. ಹೀಗಾಗಿ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನವನ್ನು ಪ್ರಿಯಾಂಕಾ ದಿಗಂತ್ಗೆ ಕೊಟ್ಟಿದ್ದಳು. ಪ್ರಿಯಾಂಕಾಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ ದಿಗಂತ್ ಅದನ್ನು ಅಡಮಾನವಿಟ್ಟಿದ್ದ. ಹಲವು ದಿನ ಕಳೆದ್ರೂ ಹಣವನ್ನು ಕೊಡದೆ, ಚಿನ್ನಾಭರಣ ವಾಪಸ್ ನೀಡದೆ ಸತಾಯಿಸಿದ್ದ.
ಪ್ರಿಯಾಂಕಾ ಹಲವು ಬಾರಿ ಚಿನ್ನವನ್ನು ವಾಪಸ್ ಕೊಡು ಎಂದರು ದಿಗಂತ್ ಕೇರ್ ಮಾಡಿರಲಿಲ್ಲ. ಹೀಗಾಗಿ ಚಿನ್ನಾಭರಣ ತಾನೂ ತೆಗೆದುಕೊಂಡಿರುವ ವಿಷಯ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿದ್ದ ಪ್ರಿಯಾಂಕಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಆರೋಪಿ ದಿಗಂತ್ನ್ನ ಅರೆಸ್ಟ್ ಮಾಡಿದ್ದಾರೆ. ಪ್ರಿಯಾಂಕಾ ತಂದೆ ದೂರಿನ ಮೇರೆಗೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರು ಜನರಿಗೆ ಕಾವೇರಿ ಶಾಕ್ – ನೀರಿನ ದರ ಹೆಚ್ಚಳಕ್ಕೆ ಸಜ್ಜಾದ BWSSB..!