ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಕರ್ನಾಟಕದ ಜೀವನಾಡಿ ಮಲೆನಾಡು ಪ್ರದೇಶದಲ್ಲಿ ಬರಿದಾಗಿದ್ದ ಜಲಾಶಯಗಳೆಲ್ಲಾ ಮಳೆಯ ಅಬ್ಬರಕ್ಕೆ ಬಹುತೇಕ ಫುಲ್ ಆಗಿದೆ.
ಈಗಾಗಲೇ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಯಲ್ಲಿ 122 ಅಡಿ ನೀರು ತಪುಪಿದೆ.124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಿಂದ ಸದ್ಯ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.
ಹಾಸನದ ಹೇಮಾವತಿ ಡ್ಯಾಂನಲ್ಲಿ 2,920 ಅಡಿ ನೀರು ತಲುಪಿದೆ. ಕೇರಳದ ವೈನಾಡಿನಲ್ಲಿ ಭಾರೀ ಮಳೆಯಿಂದ ಕಬಿನಿ ಈಗಾಗಲೇ ಫುಲ್ ಆಗಿದ್ದು, ಬಿಟ್ಟುಬಿಡದೇ ಸುರಿಯುತ್ತಿರೋ ಮಳೆಗೆ ತುಂಗಾ ಡ್ಯಾಂ ಕೂಡ ಫುಲ್ ಆಗಿದೆ.
ಇನ್ನು ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂನಲ್ಲಿ 518 ಅಡಿ ನೀರು ತಲುಪಿದೆ. ಯಾದಗಿರಿಯ ಬಸವಸಾಗರ ಜಲಾಶಯದಲ್ಲಿ 492 ಅಡಿ ನೀರು ಹಾಗೂ ಕೊಡಗಿನ ಹಾರಂಗಿ ಜಲಾಶಯ ಭರ್ತಿಗೆ ಕೇವಲ 5 ಅಡಿ ಮಾತ್ರ ಬಾಕಿಯಿದೆ.
ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಯ ರಕ್ಕಸಕೊಪ್ಪ ಡ್ಯಾಂ ಫುಲ್ ಆಗಿದೆ. ವ್ಯಾಪಕ ಮಳೆಯಿಂದ ಶರಾವತಿ ಪ್ರದೇಶದಲ್ಲಿ ಡ್ಯಾಂಗಳಿಗೆ ಭಾರೀ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 69 ಸಾವಿರ ಕ್ಯುಸೆಕ್ ಒಳಹರಿವು ಏರಿಕೆಯಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಧಾನಿಗೆ ದೂರು ನೀಡಲು ನಿರ್ಧರಿಸಿದ ರಾಜ್ಯ ಸರ್ಕಾರ..!