ರಾಯಚೂರು : ದೇವಾಲಯಕ್ಕೆ ಲೈಟಿಂಗ್ ಅಳವಡಿಕೆ ವೇಳೆ ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಕನಕ ವಿದ್ಯುತ್ ದೀಪಾಲಂಕಾರ ವೇಳೆ ಮೃತಪಟ್ಟ ಯುವಕ.
ಶ್ರಾವಣ ಮಾಸದ ಕಡೆ ಶುಕ್ರವಾರ ಅಂಗವಾಗಿ ಗ್ರಾಮದ ಅಧಿದೇವತೆ ತಾಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ. ಹೀಗಾಗಿ, ದೇವಸ್ಥಾನಕ್ಕೆ ಲೈಟಿಂಗ್ ಅಳವಡಿಕೆ ನಡೆದಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾನೆ. ಘಟನೆ ಬಳಿಕ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಗದಗ : ಕಾಣೆಯಾಗಿದ್ದ ಮಹಿಳೆ 3 ದಿನದ ನಂತರ ಬಾವಿಯಲ್ಲಿ ಜೀವಂತವಾಗಿ ಪತ್ತೆ..!
Post Views: 19