Download Our App

Follow us

Home » ಕ್ರೀಡೆ » ವೃತ್ತಿ ಜೀವನಕ್ಕೆ ಕಣ್ಣೀರಿನ ವಿದಾಯ ಹೇಳಿದ ಟೆನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್..!

ವೃತ್ತಿ ಜೀವನಕ್ಕೆ ಕಣ್ಣೀರಿನ ವಿದಾಯ ಹೇಳಿದ ಟೆನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್..!

ದಿಗ್ಗಜ ಟೆನಿಸ್‌ ಆಟಗಾರ, ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ರಾಫೆಲ್ ನಡಾಲ್ ಟೆನಿಸ್‌ಗೆ ಭಾವುಕ ವಿದಾಯ ಹೇಳಿದ್ದಾರೆ. ಸ್ಪೇನ್ ಲೆಜೆಂಡ್‌ ಆಟಗಾರ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ವಿದಾಯ ಪಂದ್ಯದಲ್ಲಿ ಸೋತು, ವೃತ್ತಿ ಬದುಕಿಗೆ ಸೋಲಿನ ವಿದಾಯ ಹೇಳಿದ್ದಾರೆ.

ನೆದರ್ಲೆಂಡ್ಸ್‌ ಆಟಗಾರ ಬೊಟಿಕ್ ವ್ಯಾನ್ ಡಿ ಜಾಂಡ್ಶುಲ್ಪ್ ವಿರುದ್ಧ 4-6, 4-6 ನೇರ ಸೆಟ್‌ಗಳಲ್ಲಿ ನಡಾಲ್‌ ಸೋಲು ಕಂಡರು. ಈ ಸೋಲಿನೊಂದಿಗೆ ರಾಫೆಲ್ ನಡಾಲ್ 20 ವರ್ಷಗಳ ತಮ್ಮ ವರ್ಣರಂಜಿತ ಟೆನಿಸ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.

ರಾಫೆಲ್ ನಡಾಲ್ ದಿ ಕಿಂಗ್ ಆಫ್ ಕ್ಲೇ ಕೋರ್ಟ್ ಎಂದೇ ಗುರುತಿಸಿಕೊಂಡಿದ್ದರು. ಇದಕ್ಕೆ ಸಾಕ್ಷಿಯಾಗಿ ಕ್ಲೇ ಕೋರ್ಟ್​ನಲ್ಲಿ 63 ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಅದರಲ್ಲೂ ಫ್ರೆಂಚ್ ಓಪನ್​ನ ಕ್ಲೇ ಕೋರ್ಟ್​ನಲ್ಲಿ 14 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಹಾಗೆಯೇ ನೊವಾಕ್ ಜೊಕೊವಿಚ್ (24) ನಂತರ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಆಟಗಾರ ಎಂಬ ದಾಖಲೆ ಕೂಡ ರಾಫೆಲ್ ನಡಾಲ್ ಹೆಸರಿನಲ್ಲಿದೆ.

ಸ್ಪೇನ್ ತಾರೆ ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್‌ ಸ್ಲಾಮ್‌ಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ 4 ಬಾರಿ ಯುಎಸ್ ಓಪನ್, 2 ಬಾರಿ ವಿಂಬಲ್ಡನ್ ಮತ್ತು 2 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ವೃತ್ತಿ ಬದುಕಿನ ಕೊನೆಯ ಟೂರ್ನಿಯಲ್ಲಿ ಸೋತು ಕಣ್ಣೀರಿನೊಂದಿಗೆ ರಾಫೆಲ್ ನಡಾಲ್ ವಿದಾಯ ಹೇಳಿದ್ದಾರೆ.

ರಾಫೆಲ್ ನಡಾಲ್ ಅವರ 20 ವರ್ಷಗಳ ವರ್ಣರಂಜಿತ ಟೆನಿಸ್ ಕೆರಿಯರ್​ನ ಸಾಧನೆಗಳ ಪಟ್ಟಿ ಈ ಕೆಳಗಿನಂತಿದೆ!

  • 1080 ಸಿಂಗಲ್ಸ್ ಜಯ
  • 92 ಸಿಂಗಲ್ಸ್ ಪ್ರಶಸ್ತಿಗಳು
  • 63 ಸಿಂಗಲ್ಸ್ ಪ್ರಶಸ್ತಿಗಳು (ಕ್ಲೇ ಕೋರ್ಟ್​)
  • 36 ಮಾಸ್ಟರ್ಸ್ ಪ್ರಶಸ್ತಿಗಳು (1000 30s)
  • 30 ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳು
  • 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು
  • 14 ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಗಳು
  • 2 ಒಲಿಂಪಿಕ್ಸ್ ಚಿನ್ನದ ಪದಕಗಳು

ಇದನ್ನೂ ಓದಿ : ಸಿಂಗಾಪುರದಲ್ಲಿ ಯಶಸ್ವಿಯಾಗಿ ನೆರವೇರಿತು ಎರಡನೇ ವಿಶ್ವ ಕನ್ನಡ ಹಬ್ಬ.. ಶುಭ ಹಾರೈಸಿದ ಶಿವಣ್ಣ..!

Leave a Comment

DG Ad

RELATED LATEST NEWS

Top Headlines

‘ಅಯೋಗ್ಯ2’ಗೆ ಮುಹೂರ್ತ ಫಿಕ್ಸ್ – ಮತ್ತೆ ಒಂದಾದ ಸ್ಯಾಂಡಲ್​ವುಡ್​ ಸೂಪರ್ ಹಿಟ್​ ಜೋಡಿ ರಚಿತಾ​-ನಿನಾಸಂ ಸತೀಶ್..!

ಕನ್ನಡದ ಸೂಪರ್ ಹಿಟ್ ಜೋಡಿ ರಚಿತಾ ರಾಮ್ ಹಾಗೂ ಸತೀಶ್ ನಿನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಇದೀಗ 6

Live Cricket

Add Your Heading Text Here