ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಅವರ ಮದುವೆ ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ರಾಧಿಕಾ ಮರ್ಚೆಂಟ್ ಅನಂತ ಅಂಬಾನಿ ಮದುವೆಯಾಗಿ ಎರಡು ತಿಂಗಳಾಗುತ್ತಿರುವಾಗಲೇ ರಾಧಿಕಾ ಮರ್ಚೆಂಟ್ ಗರ್ಭಿಣೆಯಾದ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಅಂಬಾನಿ ಕುಟುಂಬ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಿತು. ಈ ಸಂದರ್ಭದಲ್ಲಿ ಇಟೆಲಿಯಾದಲ್ಲಿ ಸೆಲೆಬ್ರಿಟಿಗಳ ಮೇಳವೇ ನೆರೆದಿತ್ತು. ಈ ಮಧ್ಯೆ ರಾಧಿಕಾ ಅವರ ಕೆಲವು ಫೋಟೋಗಳು ವೈರಲ್ ಆಗುತ್ತಿದೆ.
ಮೊದಲ ಗಣೇಶ ಚತುರ್ಥಿಯಂದು ರಾಧಿಕಾ ಮರ್ಚೆಂಟ್ ಸೀರೆಯಲ್ಲಿ ಮಿಂಚಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್ ಅವರು ಹೊಟ್ಟೆ ಮೇಲೆ ಕೈ ಇಟ್ಟುಕೊಂಡು ನಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇದರಿಂದಾಗಿ ರಾಧಿಕಾ ಮರ್ಚೆಂಟ್ ಗರ್ಭಿಣಿ ಅನ್ನೊ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಧಿಕಾ ಖಂಡಿತಾ ಗರ್ಭಿಣಿ ಹೀಗಾಗಿ ಫ್ಲಾಟ್ ಚಪ್ಪಲಿ ಧರಿಸಿದ್ದಾರೆ. ಅಷ್ಟೇ ಅಲ್ಲದೆ ಹೊಟ್ಟೆಯ ಮೇಲೆ ಕೈ ಇಟ್ಟು ನೀತಾ ಅಂಬಾನಿಯ ಕೈ ಹಿಡಿದು ನಡೆಯುತ್ತಿದ್ದಾರೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ದೀಪಿಕಾ ಪಡುಕೋಣೆ..!