Download Our App

Follow us

Home » ಸಿನಿಮಾ » ನನ್ನ ಮಗಳು ಭೈರಾದೇವಿಗೆ ಆಡಿಷನ್ ಕೊಟ್ಟಿದನ್ನು ನೋಡಿ ನಾನೇ ಬಿಕ್ಕಿ ಬಿಕ್ಕಿ ಅತ್ತೆ – ರಾಧಿಕಾ ಕುಮಾರಸ್ವಾಮಿ..!

ನನ್ನ ಮಗಳು ಭೈರಾದೇವಿಗೆ ಆಡಿಷನ್ ಕೊಟ್ಟಿದನ್ನು ನೋಡಿ ನಾನೇ ಬಿಕ್ಕಿ ಬಿಕ್ಕಿ ಅತ್ತೆ – ರಾಧಿಕಾ ಕುಮಾರಸ್ವಾಮಿ..!

ಕನ್ನಡ ಚಿತ್ರರಂಗದ ಅದ್ಭುತ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ತಮ್ಮ ಮುಂದಿನ ಸಿನಿಮಾ ಬೈರಾದೇವಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 2002ರಲ್ಲಿ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ರಾಧಿಕಾ, 2012ರಲ್ಲಿ ಲಕ್ಕಿ ಚಿತ್ರದ ಮೂಲಕ ನಿರ್ಮಾಪಕಿಯಾದರು. ಇದೀಗ ರಾಧಿಕಾ ಕುಮಾರಸ್ವಾಮಿ BTV ಸಂದರ್ಶನದಲ್ಲಿ ತಮ್ಮ ಮಗಳಿಗೆ ಸಿನಿಮಾದಲ್ಲಿರೋ ಅತ್ಯಾಸಕ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಮಗಳು ಶಮಿಕಾಳ ವಿಷಯದಲ್ಲಿ ನನಗೇನೂ ಟೆನ್ಷನ್ನೇ ಇಲ್ಲ. ನಾನು ಹೇಳಿದಂತೆ ಕೇಳ್ತಾಳೆ. ಡಾನ್ಸ್​ ಮಾಡು ಅಂದ್ರೆ ಮಾಡ್ತಾಳೆ, ಅಭ್ಯಾಸನೂ ಚೆನ್ನಾಗಿ ಮಾಡ್ತಾಳೆ, ನನಗೆ ಒಂದು ರೀತಿಯಲ್ಲಿ ಅವಳೇ ಅಮ್ಮ ಇದ್ದಹಾಗೆ. ಹೀಗೆ ಡ್ರೆಸ್​ ಮಾಡ್ಕೊ, ವೇಟ್​ ಲಾಸ್​ ಮಾಡ್ಕೋ ಎಂದೆಲ್ಲಾ ಹೇಳ್ತಾ ಇರ್ತಾಳೆ. ನನ್ನ ಆ್ಯಕ್ಟಿಂಗ್​ ಬಗ್ಗೆನೂ ಸಜೆಷನ್​ ಕೊಡ್ತಾನೇ ಇರ್ತಾಳೆ. ಹಾಗೆ ನೋಡಿದರೆ ಅವಳಿಗಿಂತ ನಾನೇ ಸ್ವಲ್ಪ ಹೆಚ್ಚು ತುಂಟಿ ಎಂದಿದ್ದಾರೆ.

ಅವಳಿಗೆ ಸಿನಿಮಾ ಅಂದ್ರೆ ಸಖತ್​ ಇಷ್ಟ. ಭೈರಾದೇವಿಯಲ್ಲಿ ಅವಳೂ ನಟನೆ ಮಾಡಬೇಕಿತ್ತು. ಮಗಳಿಗೆ ಈ ಚಿತ್ರದಲ್ಲಿ ನಟಿಸಲು ಕೊಡ್ತೀರಾ ಎಂದು ನಿರ್ದೇಶಕರು ಕೇಳಿದ್ರು. ಅದ್ಯಾವುದೋ ಗುಂಗಿನಲ್ಲಿ ಓಕೆ ಅಂದುಬಿಟ್ಟೆ. ಅವಳ ಆಡಿಷನ್​ ಕೂಡ ನಡೆಯಿತು. ಸ್ಕ್ರಿಪ್ಟ್​ ಒಂದನ್ನು ಅವಳಿಗೆ ಕೊಟ್ಟಿದ್ದರು. ಅದು ಅಪ್ಪ ಮತ್ತು ಮಗಳ ನಡುವಿನ ಸೆಂಟಿಮೆಂಟ್​ ಸೀನ್​. ಅವಳು ಯಾವ ರೀತಿಯಲ್ಲಿ ಆಡಿಷನ್ ಕೊಟ್ಟಳು ಎಂದರೆ ನಾನೂ ಅತ್ತೇ ಬಿಟ್ಟೆ ಎಂದು ರಾಧಿಕಾ ಹೇಳಿದ್ದಾರೆ.

ಸೆಂಟಿಮೆಂಟ್​ ದೃಶ್ಯಗಳಲ್ಲಿ ನಾನು ಸಾಮಾನ್ಯವಾಗಿ ಗಿಸರಿನ್​ ಬಳಸುವುದೇ ಇಲ್ಲ. ಶಮಿಕಾ ಕೂಡ ಗಿಸರಿನ್​ ಬಳಸದೇ ಭಾವುಕಳಾಗಿ ಕೊಟ್ಟ ಸ್ಕ್ರಿಪ್ಟ್​ಗೆ ಆ್ಯಕ್ಟ್​ ಮಾಡಿದಳು. ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಅವಳ ಆಡಿಷನ್​ ನೋಡಿ ಡೈರೆಕ್ಟರ್​ ಓಕೆ ಅಂದುಬಿಟ್ಟರು. ಆದರೆ ಅವಳು ರಾತ್ರಿ ಕನಸಿನಲ್ಲಿಯೂ ಸಿನಿಮಾದ ಕನವರಿಕೆ ಮಾಡುತ್ತಿದ್ದಳು. ಸ್ಕ್ರಿಪ್ಟ್​ ಬಗ್ಗೆ ಯೋಚಿಸುತ್ತಿದ್ದಳು. ರಾತ್ರಿ ಎದ್ದು ಕುಳಿತು ನನ್ನ ಸ್ಕಿನ್​ ಟ್ಯಾನ್​ ಆಗಿದೆ, ಬೆಳ್ಳಗೆ ಮಾಡು ಎಂದೆಲ್ಲಾ ಹೇಳಲು ಶುರು ಮಾಡಿದಳು. ಅದನ್ನು ನೋಡಿ ನನಗೆ ಭಯ ಆಯ್ತು.

ಓದಿನಲ್ಲಿ ಅವಳ ಆಸಕ್ತಿ ಕಡಿಮೆ ಆಗ್ತಿದೆ ಎನ್ನಿಸಿತು. ಸಿನಿಮಾವನ್ನೇ ತುಂಬಾ ಹಚ್ಚಿಕೊಂಡುಬಿಟ್ಟಳು. ಈಗ ಶಿಕ್ಷಣ ಮುಖ್ಯ ಅಲ್ವಾ? ಆದರೆ ಇವಳು ಮಾಡ್ತಿರೋದು ನೋಡಿದ್ರೆ ಎಲ್ಲಿ ಶಿಕ್ಷಣಕ್ಕೆ ಹೊಡೆತ ಬೀಳುತ್ತೋ ಎಂದು ಗಾಬರಿಯಾಗಿ ನೇರವಾಗಿ ಡೈರೆಕ್ಟರ್​ಗೆ ಕಾಲ್​ ಮಾಡಿ ನೀವೇ ಹೇಗಾದ್ರೂ ಈ ಸಿನಿಮಾಕ್ಕೆ ಬರೋದು ಬೇಡ ಅಂತ ಹೇಳಿಬಿಡಿ, ನಾನು ಹೇಳೋದು ಕಷ್ಟ ಆಗತ್ತೆ ಅಂದೆ. ಡೈರೆಕ್ಟರ್​ ನನ್ನ ಮಾತನ್ನು ಒಪ್ಪಿ, ಈ ಸಿನಿಮಾ ಬೇಡ, ಮುಂದಿನದ್ದಕ್ಕೆ ತೆಗೆದುಕೊಳ್ಳೋಣ ಎಂದ್ರು. ಅದನ್ನು ಕೇಳಿದಾಗ ಇಡೀ ದಿನ ಅಪ್​ಸೆಟ್​ ಆದಳು. ನಾನು ಏನೋ ಒಂದು ಸುಳ್ಳು ಹೇಳಿ ಮ್ಯಾನೇಜ್​ ಮಾಡಿದೆ. ಶಿಕ್ಷಣ ಅಂತೂ ಅವಳು ಮುಗಿಸಲೇ ಬೇಕು. ಸದ್ಯ ಟೆನ್ನೀಸ್​ ಕಡೆಯೂ ಅವಳ ಒಲವು ಇದೆ. ಮುಂದೆ ಟೆನ್ನೀಸ್​ ಪ್ಲೇಯರ್​ ಆಗ್ತಾಳೋ, ಸಿನಿಮಾಕ್ಕೆ ಬರ್ತಾಳೋ ಅವಳಿಗೆ ಬಿಟ್ಟಿದ್ದು. ನಾನು ಯಾವುದಕ್ಕೂ ಫೋರ್ಸ್ ಮಾಡಲ್ಲ. ನನ್ನ ಅಪ್ಪ-ಅಮ್ಮನೂ ನನಗೆ ಫೋರ್ಸ್​ ಮಾಡಲಿಲ್ಲ. ಹಾಗಾಗಿ ಶಿಕ್ಷಣದ ಜೊತೆಗೆ ಅವಳು ಏನು ಮಾಡಿದ್ರೂ ಓಕೆ ಎಂದು ರಾಧಿಕಾ ಹೇಳಿದ್ದಾರೆ.

ಇದನ್ನೂ ಓದಿ : ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ..!

 

 

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here