ಯಾದಗಿರಿ : ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಹಲವು ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲದೇ ಪರಶುರಾಮ್ ಸಾವಿಗೆ ಸ್ಥಳೀಯ ಶಾಸಕ ಚನ್ನಾರೆಡ್ಡಿ ಮತ್ತು ಪುತ್ರ ಪಂಪನಗೌಡ ಅಲಿಯಾಸ್ ಸನ್ನಿಗೌಡ ಕಾರಣ ಎಂದು PSI ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಎಸ್ಪಿಗೆ ಶಾಸಕರ ವಿರುದ್ಧ ದೂರು ನೀಡಿದ್ದಾರೆ.
ಇದೀಗ ಬಿಟಿವಿಯ ನಿರಂತರ ವರದಿಗೆ ಬೆಚ್ಚಿಬಿದ್ದ ಕಾಂಗ್ರೆಸ್ ಸರ್ಕಾರ, PSI ಪತ್ನಿ ದೂರಿನ ಮೇರೆಗೆ ಯಾದಗಿರಿ ಕಾಂಗ್ರೆಸ್ MLA ಚನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ವಿರುದ್ಧ ಕೊನೆಗೂ FIR ದಾಖಲಾಗಿದೆ. PSI ಪತ್ನಿ ಶ್ವೇತಾ, ತನ್ನ ಪತಿಗೆ MLA ಚನ್ನಾರೆಡ್ಡಿ ಹಾಗೂ ಪುತ್ರ ಕಿರುಕುಳ ನೀಡಿದ್ದಾರೆ. 25 ಲಕ್ಷ ಲಂಚ ಕೊಡದಿದ್ದಲ್ಲಿ ಟ್ರಾನ್ಸ್ಫರ್ ಬೆದರಿಕೆ ಹಾಕಿದ್ದರೆಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ದೂರಿನ ಅನ್ವಯ ಇದೀಗ ಇಬ್ಬರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ IPC 352, 102, 108 (3) (5) ಸೆಕ್ಷನ್ಗಳಡಿ FIR ದಾಖಲಾಗಿದೆ. ಈ ಪ್ರಕರಣದಲ್ಲಿ ಯಾದಗಿರಿಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ A1 ಆರೋಪಿಯಾಗಿದ್ದು, 2ನೇ ಆರೋಪಿಯಾಗಿ ಶಾಸಕರ ಪುತ್ರ ಪಂಪನಗೌಡ ಅಲಿಯಾಸ್ ಸನ್ನಿಗೌಡ ವಿರುದ್ಧ FIR ದಾಖಲಾಗಿದೆ. ಯಾವುದೇ ಕ್ಷಣದಲ್ಲಿ ಶಾಸಕ ಚನ್ನಾರೆಡ್ಡಿ, ಮತ್ತವನ ಪುತ್ರ ಸನ್ನಿಗೌಡ ಅರೆಸ್ಟ್ ಆಗುವ ಸಾಧ್ಯತೆಯಿದೆ.
- ಸೆಕ್ಷನ್ 352 – ಉದ್ದೇಶಪೂರ್ವಕವಾಗಿ ವ್ಯಕ್ತಿಗೆ ಅವಮಾನ
- ಸೆಕ್ಷನ್ 108 – ಆತ್ಮಹತ್ಯೆಗೆ ಪ್ರಚೋದನೆ ನೀಡುವುದು
- ಸೆಕ್ಷನ್ 108 (3) (5) – SC-ST ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆ
ಇದನ್ನೂ ಓದಿ : ಮುಡಾ-ವಾಲ್ಮೀಕಿ ಭ್ರಷ್ಟಾಚಾರದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರು ಭಾಗಿ – ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆ..!