ಯಾದಗಿರಿ : ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ (ಸನ್ನಿ ಗೌಡ) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ಕಾಂಗ್ರೆಸ್ MLA ವಿರುದ್ಧ ತನಿಖೆಗೆ ಬಿಜೆಪಿ ನಾಯಕರು ಅಗ್ರಹಿಸಿದ್ದಾರೆ.
PSI ಪರಶುರಾಮ್ ಸಾವಿನ ತನಿಖೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ 25 ಲಕ್ಷ ರೂ. ಕೇಳಿದ್ದರು. ಅದನ್ನು ಕೊಡಲು ಸಾಧ್ಯವಾಗದೆ PSI ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಶಾಸಕರ ವಿರುದ್ಧ ಅವ್ರ ಪತ್ನಿ ಆರೋಪಿಸಿದ್ದಾರೆ. ಇಡೀ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಆಗ್ಬೇಕು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, PSI ಪರಶುರಾಮ್ ಬಳಿ ನಿಮ್ಮ MLA 25 ಲಕ್ಷ ಲಂಚ ಕೇಳಿದ್ದಾರೆ. ಅದನ್ನು ಕೊಡಲಾಗದೆ PSI ನಿಧನ ಹೊಂದಿದ್ದಾರೆ ಅದಕ್ಕೆ ಏನ್ ಹೇಳ್ತಿರಾ? ನಿಮ್ಮ ಸಮುದಾಯದ ಅಧಿಕಾರಿಗೆ ನ್ಯಾಯ ಕೊಡಲು ಆಗಿಲ್ಲ. ಇನ್ನೂ ನೀವು ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತೀರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಚನ್ನಾಗೌಡ ವಿರುದ್ಧ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ ಬಸನಗೌಡ ಪಾಟೀಲ್ ಯತ್ನಾಳ ಅವರು, ಚನ್ನಾಗೌಡ ವಿರುದ್ದ ST-SC ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿ. ಹಿಂದುಳಿದ ವರ್ಗದವರ ಮೇಲೆ ಶಾಸಕರು ಕಿರುಕುಳ ಕೊಟ್ರಾ? ನೈತಿಕ ಹೊಣೆ ಹೊತ್ತು ಚನ್ನಾಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಪಾದಯಾತ್ರೆ – ಹೆಚ್ಡಿಕೆ ಕಿಡಿ..!