Download Our App

Follow us

Home » ರಾಜಕೀಯ » ರಾಜ್ಯಪಾಲರ ಪ್ರಾಸಿಕ್ಯೂಷನ್​ ಆದೇಶ ಖಂಡಿಸಿ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ..!

ರಾಜ್ಯಪಾಲರ ಪ್ರಾಸಿಕ್ಯೂಷನ್​ ಆದೇಶ ಖಂಡಿಸಿ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ..!

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರತಿ ಹೊರ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಿನ ಕ್ರಮಗಳು ಆರಂಭವಾಗಲಿದೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನೀಡಿರುವ ಆದೇಶ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಆದೇಶದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಸಿಎಂ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯಪಾಲರ ಪ್ರಾಸಿಕ್ಯೂಷನ್​ ಆದೇಶ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರು ಪ್ರತಿಭಟನೆ : ರಾಜ್ಯಪಾಲರ ನಡೆ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಟೈರ್​ಗೆ ಬೆಂಕಿ ಹಚ್ಚಿ ಸಿದ್ದು ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​​ ಕಾರ್ಯಕರ್ತರಿಂದಲೂ ಬೃಹತ್​ ಪ್ರತಿಭಟನೆ ನಡೆದಿದ್ದು, ಗೋ ಬ್ಯಾಕ್.. ಗೋ ಬ್ಯಾಕ್ ಎಂದು ರಾಜ್ಯಪಾಲರ ವಿರುದ್ಧ ರೊಚ್ಚಿ ಗೆದ್ದಿದ್ದಾರೆ. ಹಳೆ ಕೋರ್ಟ್ ಮುಂಭಾಗದ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ಶಿವರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮೋದಿ ಸೇವಕರಂತೆ ರಾಜ್ಯಪಾಲರು ಕೆಲಸ ಮಾಡ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಪೊಲೀಸರೊಂದಿಗೆ ಪ್ರತಿಭಟನಾಕಾರರ ವಾಗ್ವಾದ ನಡೆಸಿದ್ದು, ಪಟ್ಟುಬಿಡದೇ ಪ್ರತಿಭಟ‌ನಾಕಾರರು ಪ್ರತಿಭಟನೆ ಮುಂದುವರಿಸಿದ್ದಾರೆ.
ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಕ್ಯಾಬಿನೆಟ್ ಮೀಟಿಂಗ್ ರದ್ದು – ರಾಜಭವನಕ್ಕೆ ತೆರಳಲಿದೆ ಸಿಎಂ ಸಿದ್ದು ಸಂಪುಟ..!

Leave a Comment

DG Ad

RELATED LATEST NEWS

Top Headlines

ಕಾಸ್ಟಿಂಗ್​​ ಕೌಚ್​ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್​​ ಚೇಂಬರ್​​ನಲ್ಲಿ ಮೆಗಾ ಮೀಟಿಂಗ್​..!

ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್

Live Cricket

Add Your Heading Text Here