Download Our App

Follow us

Home » ಸಿನಿಮಾ » ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಚಿತ್ರದ ಟ್ರೇಲರ್ ರಿಲೀಸ್​​..!

ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಚಿತ್ರದ ಟ್ರೇಲರ್ ರಿಲೀಸ್​​..!

ಪ್ರಿಯಾಂಕಾ ಉಪೇಂದ್ರ ಅಭಿನಯದ ’ಉಗ್ರಾವತಾರ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗೆಸಿದಲ್ಲಿ ಅದ್ದೂರಿಯಾಗಿ ನಡೆಯಿತು. ಎಸ್‌ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ, ಎಸ್.ಜಿ.ಸತೀಶ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಗುರುಮೂರ್ತಿ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಪತಿ ರಿಯಲ್ ಸ್ಟಾರ್ ಉಪೇಂದ್ರ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಅವರು, ನಿರ್ದೇಶಕರ ಶ್ರಮ ಇದರಲ್ಲಿ ಕಾಣಿಸುತ್ತದೆ. ಆದರೂ ಅವರು ದುಗಡದಿಂದ ಇದ್ದಾರೆ. ಮೊದಲಬಾರಿ ನನಗೂ ಅದೇ ಆಗಿತ್ತು. ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತಿರಾ. ಮನೆಯಲ್ಲಿ ಉಗ್ರಾವತಾರ ಅವತಾರವನ್ನು ನೋಡಿದ್ದೇನೆ. ಮುಂದೆ ನೀವುಗಳು ನೋಡುತ್ತಿರಾ. ಆದರೆ ಪೋಲೀಸ್‌ರು ಗ್ಲಾಮರಸ್ ಆಗಿ ಕಾಣಿಸಬಾರದು. ಅದೇ ನನ್ನ ಕಡೆಯಿಂದ ಆಕ್ಷೇಪಣೆ. ಗ್ಲಾಮರಸ್ ಆಗಿ ಕಂಡರೆ ರೌಡಿಗಳನ್ನು ಹೇಗೆ ಸದೆಬಡಿಯುತ್ತಿರೆಂದು ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು. ಮಾತು ಮುಂದುವರೆಸುತ್ತಾ, ನಿಮ್ಮಗಳ, ಜನರ ಆರ್ಶಿವಾದ ಇದ್ದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತೆ. ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. ಅದನ್ನು ಕ್ಷಮಿಸುವಂತ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿ ಇದೆ. ಸಿನಿಮಾ ನೋಡದೆ ಅಭಿಪ್ರಾಯ ತಿಳಿಸಬೇಡಿರೆಂದು ಕೋರಿಕೊಂಡರು.

ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಾಯಕಿ ಪ್ರಿಯಾಂಕಉಪೇಂದ್ರ, ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತು. ಭಾರತದಲ್ಲಿ ಹೆಣ್ಣಮಕ್ಕಳ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಸ್ವಯಂರಕ್ಷಣೆ, ಸುರಕ್ಷ ಆಪ್, ಪೋಲೀಸರಿಗೂ ಗೌರವ ಕೊಡಿ. ಅವರು ಸಮಾಜಕ್ಕೆ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ ಎಂದರು.

ನಿರ್ದೇಶಕ ಗುರುಮೂರ್ತಿ ಮಾತನಾಡಿ, ಮೇಡಂ ಕಥೆ ಕೇಳಿ ನಾನು ಮಾಡುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೂ ಪ್ರೋತ್ಸಾಹ ಕೊಡುತ್ತಿದ್ದಾರೆ. ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ, ಹೊರಗಡೆ ಅದೇ ರೀತಿಯಲ್ಲಿ ಕಾಣಬೇಕು. ಸಮಾಜದಲ್ಲಿ ನಡೆಯತಕ್ಕಂತ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಮೇಡಂಗೆ ಈ ಚಿತ್ರದಿಂದ ಆಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿದೆ. ಇದಕ್ಕಾಗಿ ಅವರು ದೇಹಕ್ಕೆ ಕಸರತ್ತು ನೀಡಿ ಕ್ಯಾಮಾರ ಮುಂದೆ ನಿಂತಿದ್ದಾರೆ. ನಾಲ್ಕು ಭಾಷೆಯ ಡಬ್ಬಿಂಗ್ ಮುಗಿದಿದೆ. ಇನ್ನೆನಿದ್ದರೂ ಪ್ರಚಾರ ಶುರು ಮಾಡಬೇಕು. ದಯವಿಟ್ಟು ಟಾಕೀಸ್‌ಗೆ ಬನ್ನಿರೆಂದು ತಿಳಿಸಿದ್ದಾರೆ.

ಇನ್ನು  ಲಾವಿದರುಗಳಾದ ರೋಬೋಗಣೇಶ್, ಲತಾ, ದರ್ಶನ್‌ಸೂರ್ಯ, ಲಕ್ಷೀಶೆಟ್ಟಿ, ಚರಣ್, ಲೀಲಾಮೋಹನ್, ಕಾರ್ಯನ್, ಸಂಗೀತ ಸಂಯೋಜಕ ಕೃಷ್ಣಬಸ್ರೂರು, ಛಾಯಾಗ್ರಾಹಕ ನಂದಕುಮಾರ್ ಮುಂತಾದವರು ಸಂತಸ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಉಪೇಂದ್ರ ಸಹೋದರನ ಪುತ್ರ ನಟ ನಿರಂಜನ್‌ಸುದೀಂಧ್ರ, ನಿದರ್ಶನ್ ಉಪಸ್ಥಿತರಿದ್ದರು.

ಇದನ್ನೂ ಓದಿ : ‘DUNE: PROPHECY’ ಟ್ರೇಲರ್ ರಿಲೀಸ್​ – ಜಿಯೋಸಿನೆಮಾ ಪ್ರೀಮಿಯಂನಲ್ಲಿ HBOನ ಹೊಸ ಸರಣಿ ನ.18ರಂದು ಪ್ರಸಾರ..!

Leave a Comment

DG Ad

RELATED LATEST NEWS

Top Headlines

ದೊಡ್ಮನೆಯೊಳಗೆ ಬಂದು ಅಡುಗೆ ಮಾಡಿಟ್ಟು ಸ್ಫರ್ಧಿಗಳಿಗೆ ಸರ್​ಪ್ರೈಸ್ ಕೊಟ್ಟ ಕಿಚ್ಚ ಸುದೀಪ್..!

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​​ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್​ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್

Live Cricket

Add Your Heading Text Here