ಬೆಂಗಳೂರು : ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಟಿಕೆಟ್ ದರ ಹೆಚ್ಚಳದ ಚಿಂತನೆ ನಡೆಸಿದ್ದ ಖಾಸಗಿ ಬಸ್ ಮಾಲೀಕರಿಗೆ ಇದೀಗ ಶಾಕ್ ಎದುರಾಗಿದೆ. ಮನಸೋ ಇಚ್ಛೆ ಟಿಕೆಟ್ ದರ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ರಾಜ್ಯ ಸಾರಿಗೆ ಇಲಾಖೆ ವಾರ್ನಿಂಗ್ ಕೊಟ್ಟಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಆನ್ ಲೈನ್ ಮೂಲಕ ಟಿಕೆಟ್ ದರವನ್ನು ಹೆಚ್ಚಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರಿಂದ ಸಾಮಾನ್ಯ ಟಿಕೆಟ್ ದರಕ್ಕಿಂತ ಹೆಚ್ಚು ಸಂಗ್ರಹಿಸಬಾರದು. ದುಪ್ಪಟ್ಟು ಹಣ ಸಂಗ್ರಹಿಸುವ ವಾಹನ ಮಾಲೀಕರ ಪರ್ಮಿಟ್ ಹಾಗೂ ನೋಂದಣಿ ಪತ್ರ ಅಮಾನತು ಮಾಡಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಪೋಟಕ ಸಾಮಗ್ರಿಗಳ ಸಾಗಾಣಿಕೆಗೆ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆ, ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಸಂಗ್ರಹಿಸಿದ್ರೆ ಸಾರ್ವಜನಿಕರು ದೂರು ನೀಡುವಂತೆ ಮನವಿ ಮಾಡಿದೆ.
ಹಾಗಾಗಿ ಖಾಸಗಿ ಬಸ್ ಮಾಲೀಕರು ಸಾರಿಗೆ ಇಲಾಖೆ ಮೊರೆ ಹೋಗಿದ್ದಾರೆ. ಟಿಕೆಟ್ ದರ ಹೆಚ್ಚಿಸಲು ಅವಕಾಶ ಮಾಡಿಕೊಡವಂತೆ ಖಾಸಗಿ ಬಸ್ ಮಾಲೀಕರ ಒಕ್ಕೂಟದಿಂದ ಇಲಾಖೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್ – ಈ ಸಲ ಭಟ್ರದ್ದೇ ಪಂಚಾಯಿತಿ..!