Download Our App

Follow us

Home » ಸಿನಿಮಾ » ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ – ಬಾಲನಟ ಮಾ.ರೋಹಿತ್​​ಗಾಗಿ ಅಭಿಮಾನಿಗಳಿಂದ ಪ್ರಾರ್ಥನೆ..!

ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ – ಬಾಲನಟ ಮಾ.ರೋಹಿತ್​​ಗಾಗಿ ಅಭಿಮಾನಿಗಳಿಂದ ಪ್ರಾರ್ಥನೆ..!

ಕಾಟೇರ ಸಿನಿಮಾದಲ್ಲಿ ನಟಿಸಿರುವ ಬಾಲನಟ ಮಾಸ್ಟರ್ ರೋಹಿತ್ ನ.17ರಂದು ಮಧ್ಯರಾತ್ರಿ ಭೀಕರ ಅಪಘಾತಕ್ಕೀಡಾಗಿದ್ದರು. ಈಗ ಮಾ.ರೋಹಿತ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಾ ಇದ್ದಾನೆ.

ಕಾಟೇರ ಸಿನಿಮಾ ನೋಡಿದವರಿಗೆಲ್ಲಾ ಪುಟ್ಟರಾಜುವಿನ ಪಾತ್ರ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ನಾಯಕನ ಜೊತೆ ಸದಾ ಇರೋ ಈ ಪುಟಾಣಿ ಭಂಟ ತನ್ನ ನಟನೆಯಿಂದ ಎಲ್ಲರಿಗೂ ಮೋಡಿ ಮಾಡಿದ್ದ. ನಾಯಕನಟ ದರ್ಶನ್ ಎದುರು ಬಾಲನಟ ಮಾಸ್ಟರ್ ಹೀರೋವನ್ನೇ ಮೀರಿಸುವಂತೆ ಪರ್ಫಾರ್ಮ್ ಮಾಡಿದ್ದ. ಮಾಸ್ಟರ್​ ರೋಹಿತ್ ತನ್ನ ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ.

ಸತ್ಯ ನಿರ್ದೇಶನದ ಒಂದಲ್ಲಾ ಎರಡಲ್ಲಾ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ರೋಹಿತ್​ಗೆ 2018ರ ಸಾಲಿನ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಭಾನುವಾರ ರಾತ್ರಿ ಮೈಸೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ತಾಯಿ ಜೊತೆಗೆ ತೆರಳಿದ್ದ ರೋಹಿತ್​ ಮರಳಿ ಬರುವಾಗ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಅಪಘಾತ ಸಂಭವಿಸಿದೆ. ರೋಹಿತ್ ಮತ್ತವರ ತಾಯಿ ಇದ್ದ ಕಾರ್​ಗೆ ಬಸ್ ಡಿಕ್ಕಿ ಹೊಡೆದು ಕಾರ್ ನುಜ್ಜುಗುಜ್ಜಾಗಿ ಹೋಗಿದೆ.

ಮಾಸ್ಟರ್ ರೋಹಿತ್ ದಂತದ ವಸುಡು ಕಟ್ ಆಗಿ, ತಲೆ ಬುರುಡೆಗೂ ಗಾಯಗಳಾಗಿವೆ. ರೋಹಿತ್ ತಾಯಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾ. ರೋಹಿತ್ ಸಾವನ್ನು ಗೆದ್ದು ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ : ಅನುದಾನ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಅತೃಪ್ತಿ – ಸಚಿವ ಜಮೀರ್​ ಮೇಲೆ ಗವಿಯಪ್ಪ ಆಕ್ರೋಶ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here