ಮೈಸೂರು : ಸಿದ್ದರಾಮಯ್ಯ ಸಿದ್ದಾಂತದ ಬಗ್ಗೆ ನನ್ನ ವಿರೋಧ ಇದೆ, ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತೂ ವಿರೋಧಿಸಿಲ್ಲ. ಪ್ರಾಧಿಕಾರ ರಚನೆಯಾದ್ರೆ ಮಾತ್ರ ಬೆಟ್ಟ ಅಭಿವೃದ್ಧಿ ಆಗುತ್ತೆ, ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ಪ್ರಾಧಿಕಾರ ಬೇಕು ಎಂದು ಚಾಮುಂಡಿ ಪ್ರಾಧಿಕಾರದ ಪರ ಪ್ರತಾಪ್ ಸಿಂಹ ಬ್ಯಾಟಿಂಗ್ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬೆಟ್ಟಕ್ಕೆ ಪೊಲೀಸ್ ಸ್ಟೇಷನ್, ಆಸ್ಪತ್ರೆ ಬೇಕು ಇದೆಲ್ಲಾ ಬೇಕೇಬೇಕು. ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಪ್ರಾಧಿಕಾರ ರಚಿಸಿರೋದು ಒಳ್ಳೆಯದು, ಆಸ್ತಿ ವಿವಾದದ ಬಗ್ಗೆ ನಾನೇನೂ ಮಾತನಾಡಲ್ಲ. ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು ಎಂದಿದ್ದಾರೆ.
ಅಮೃತ್ ಯೋಜನೆ ಕುಡಿಯುವ ನೀರು ಬೆಟ್ಟಕ್ಕೆ ತಲುಪದಿರಲು ಕಾರಣ ಯಾರು.? ಪೈಪ್ಲೈನ್ ಎಲ್ಲಿ ತಡೆದು ನಿಲ್ಲಿಸಿದ್ದಾರೆ..? ನೀವೇ ಹುಡುಕಿ. ನಾನು ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದು ಪ್ರತಾಪ್ ಸಿಂಹ ಸಂಸದ ಯದುವೀರ್ ಹಸೆರು ಹೇಳದೇ ಟಾಂಗ್ ಕೊಟ್ಟಿದ್ದಾರೆ.
ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಇತ್ತೀಚೆಗೆ, ರಾಜಮಾತೆ ಪ್ರಮೋದಾ ದೇವಿಯವರು ಚಾಮುಂಡಿ ಬೆಟ್ಟ ನಮ್ಮ ಮನೆತನದ ಸ್ವತ್ತು ಎಂದು ಹೇಳಿದ್ದರು. ಅದರ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯನವರು ಮೈಸೂರಿಗೆ ಭೇಟಿ ನೀಡಿ ಚಾಮುಂಡಿಬೆಟ್ಟ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದನ್ನು, ಹಾಲಿ ಸಂಸದ ಯದುವೀರ್ ಅವರು ವಿರೋಧಿಸಿದ್ದರು. ಇದೀಗ ಈ ಬಗ್ಗೆ ಪ್ರತಾಪ್ ಸಿಂಹ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ – ಸಿಎಂ ಸಿದ್ದು..!