ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಣಿತಾ ಸುಭಾಷ್ 2024ರಲ್ಲಿ 2ನೇ ಮಗುವಿಗೆ ಜನ್ಮ ನೀಡಿದರು. ಇದೀಗ ಪ್ರಣಿತಾ ಸುಭಾಷ್ ಅವರು ತಮ್ಮ ಮಗಳ ಜೊತೆಗೆ ಮಗನ ಫೋಟೋವನ್ನು ಕೂಡ ರಿವೀಲ್ ಮಾಡಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ನಟಿಯ ಅಂದವನ್ನು ಹೊಗಳೋದರಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಮಕ್ಕಳಾದರೂ ಅದೇ ಚಾರ್ಮ್ ಉಳಿಸಿಕೊಂಡಿರುವ ಪ್ರಣೀತಾರ ಬ್ಯೂಟಿಯನ್ನು ಹಾಡಿ ಹೊಗಳಿದ್ದಾರೆ ಫ್ಯಾನ್ಸ್.
2021ರಲ್ಲಿ ಪ್ರಣೀತಾ ಉದ್ಯಮಿ, ವೆಗಾ ಸಿಟಿ ಮಾಲ್ ಮಾಲೀಕ ನಿತಿನ್ ರಾಜುರನ್ನು ವಿವಾಹವಾದರು. ಮದುವೆಯಾದ ಬಳಿಕ ಸಿನಿಮಾದಲ್ಲಿ ಪ್ರಣೀತಾ ಕಾಣಿಸಿಕೊಂಡಿದ್ದು ಕಡಿಮೆಯೇ. ಈ ವರ್ಷ ಪ್ರಣೀತಾ ನಟನೆಯ ಮಲಯಾಳಂ ಸಿನಿಮಾ ‘ತಂಗಮಣಿ’ ಹಾಗೂ ಕನ್ನಡದಲ್ಲಿ ‘ರಾಮನ ಅವತಾರ’ ಸಿನಿಮಾ ಬಿಡುಗಡೆಯಾಗಿತ್ತು.
ಪ್ರಣೀತಾ 2022ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. 2024ರ ಜುಲೈನಲ್ಲಿ ಎರಡನೇ ಪ್ರೆಗ್ನೆನ್ಸಿ ಬಗ್ಗೆ ಘೋಷಿಸಿದ ಪ್ರಣೀತಾ, ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ತಮ್ಮ 2ನೇ ಮಗುವಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ ಮತ್ತು ಅವರ ಪತಿ ನಿತಿನ್ ರಾಜು ತಮ್ಮ 2ನೇ ಮಗುವಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೂ ಮಗುವಿನ ಪರಿಚಯ ಮಾಡಿಕೊಟ್ಟಿದ್ದಾರೆ.
ಪ್ರಣೀತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದು, ಮಗನಿಗೆ ಇನ್ನೂ ಹೆಸರಿಟ್ಟಿಲ್ಲ. ತಮ್ಮನ ಆಗಮನದಿಂದ ಮಗಳು ಖುಷಿಯಾಗಿದ್ದಾಳೆ ಎಂದಿದ್ದಾರೆ. ಇಬ್ಬರೂ ಮುದ್ದಾದ ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ : ಆಸ್ತಿಗಾಗಿ ತಂದೆ, ಮಲತಾಯಿಯನ್ನ ಕೊಚ್ಚಿ ಕೊಲೆಗೈದ ಮಗ..!